ಮೋದಿ ಸಂ'ಪುಟ್ಟ' ಸರ್ಕಸ್

ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಸರ್ಕಾರ ಸೇರಲು ಸತ್ತಾಯಿಸುತ್ತಿರುವ ಶಿವಸೇನೆಗೆ ಬಿಸಿಮುಟ್ಟಿಸುವ ರೀತಿಯಲ್ಲಿಯೇ...
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಸರ್ಕಾರ ಸೇರಲು ಸತ್ತಾಯಿಸುತ್ತಿರುವ ಶಿವಸೇನೆಗೆ ಬಿಸಿಮುಟ್ಟಿಸುವ ರೀತಿಯಲ್ಲಿಯೇ ಆ ಪಕ್ಷದ ಸಂಸದರಾಗಿದ್ದ ಸುರೇಶ್ ಪ್ರಭು ಅವರನ್ನು ಒಳಗೊಂಡು ತಮ್ಮ ಸಚಿವ  ಸಂಪುಟವನ್ನು ಪ್ರಧಾನಿ ಮೋದಿ ಭಾನುವಾರ ಇದೇ ಮೊದಲ ಬಾರಿಗೆ ವಿಸ್ತರಿಸಿದ್ದಾರೆ.

ಮನೋಹರ್ ಪರಿಕ್ಕರ್, ಸುರೇಶ್ ಪ್ರಭು  ಸೇರಿದಂತೆ ನಾಲ್ವರು ಸಂಪುಟ ದರ್ಜೆ ಸಚಿವರು ಮತ್ತು 17 ಸಹಾಯಕ ಸಚಿವರು ಪ್ರಮಾಣ ಸ್ವೀಕರಿಸಿದ್ದಾರೆ. ಎರಡನೇ ಅಂಶವೆಂದರೆ ಬಿಹಾರದಲ್ಲಿ ಮುಂದಿನ ವರ್ಷ ನಡೆಯಲಿರುವ  ವಿಧಾನಸಭೆ ಚುನಾವಣೆ ಗಮಮದಲ್ಲಿರಿಸಿಕೊಂಡು ಬಿಜೆಪಿಯ ಗಿರಿರಾಜ್ ಸಿಂಗ್ ಮತ್ತು  ಕಳೆದ ಲೋಕಸಭೆ  ಚುನಾವಣೆಯಲ್ಲಿ ಪಾಟಲಿಪುತ್ರ ಕ್ಷೇತ್ರದಿಂದ ಲಾಲು ಯಾದವ್ ಪುತ್ರಿ ಮಿಸಾ ಭಾರತಿಯನ್ನು ಸೋಲಿಸಿದ್ದ ರಾಮ್ ಕೃಪಾಲ್ ಯಾದವ್‌ಗೆ ಸ್ಥಾನ ಕಲ್ಪಿಸಲಾಗಿದೆ. 25 ಸ್ಥಾನಗಳನ್ನು ಗೆಲ್ಲಿಸಿಕೊಟ್ಟ ರಾಜಸ್ಥಾನಕ್ಕೆ ಈ ಬಾರಿ 2 ಸ್ಥಾನಗಳನ್ನು ನೀಡಲಾಗಿದೆ. ಈ ಪೈಕಿ ನಿವೃತ್ತ ಸೇನಾಧಿಕಾರಿ, ಒಲಿಂಪಿಯನ್ ರಾಜ್ಯವರ್ಧನ್ ಸಿಂಗ್ ರಾಥೋಡ್ ಪ್ರಮುಖರು.

ಎಂಟು ಮಹಿಳೆಯರು


ಮೋದಿ ಸಂಪುಟದಲ್ಲಿ ಮಹಿಳಾ ಸಚಿವರ ಸಂಖ್ಯೆ ಈಗ ಎಂಟು. ಉತ್ತರ ಪ್ರದೇಶದ ಫತೇಪುರದಿಂದ ಮೊದಲ ಬಾರಿಗೆ ಸಂಸದರಾಗಿರುವ ಸಾದ್ವಿ ನಿರಂಜನ್ ಜ್ಯೋತಿ ಭಾನುವಾರ ಪ್ರಮಾಣ ಸ್ವೀಕರಿಸಿದ ಏಕೈಕ ಮಹಿಳಾ ಸದಸ್ಯೆ. ಸುಷ್ಮಾ ಸ್ವರಾಜ್, ಉಮಾ ಭಾರತಿ, ನಜ್ಮಾ ಹೆಫ್ತುಲ್ಲಾ, ಮನೇಕಾ ಗಾಂಧಿ,  ಹರ್‌ಸಿ ಮ್ರತ್ ಕೌರ್ ಬಾದಲ್, ನಿರ್ಮಲಾ ಸೀತಾರಾಮನ್ ಮತ್ತು ಸ್ಮೃತಿ ಇರಾನಿ ಇತರ ಮಹಿಳಾ ಸಚಿವರು.

ಪುನರ್ ರಚಿತ ಸಂಪುಟ, ಖಾತೆ ವಿವರ


ಸಂಪುಟ ಸಚಿವರು


-ಅರುಣ್ ಜೇಟ್ಲಿ  ಹಣಕಾಸು , ಕಾರ್ಪೊರೇಟ್, ವಾರ್ತಾ ಮತ್ತು ಪ್ರಸಾರ
ಮನೋಹರ್ ಪರಿಕ್ಕರ್  ರಕ್ಷಣೆ
ಸುರೇಶ್ ಪ್ರಭು  ರೈಲ್ವೆ
-ಡಿ.ವಿ.ಸದಾನಂದಗೌಡ ಕಾನೂನು ಮತ್ತು ನ್ಯಾಯ
-ರವಿಶಂಕರ್ ಪ್ರಸಾದ್  ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ

ಜೆ.ಪಿ ನಡ್ಡಾ  -ಆರೋಗ್ಯ ಮತ್ತು ಕುಟುಂಬ ಕಲ್ಯಾಣ

ಬೀರೇಂದ್ರ ಸಿಂಗ್  - ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಕುಡಿವ ನೀರು ಮತ್ತು ನೈರ್ಮಲ್ಯ

-ಡಾ. ಹರ್ಷವರ್ಧನ್  -ವಿಜ್ಞಾನ ಮತ್ತು ತಂತ್ರಜ್ಞಾನ, ಭೂವಿಜ್ಞಾನ
-ನಿತಿನ್ ಗಡ್ಕರಿ- ರಸ್ತೆ ಸಾರಿಗೆ , ಹೆದ್ದಾರಿ, ನೌಕಾಯಾನ


ಸಹಾಯಕ ಸಚಿವರು


ಬಂಡಾರು ದತ್ತಾತ್ರೇಯ -ಕಾರ್ಮಿಕ ಮತ್ತು ಉದ್ಯೋಗ (ಸ್ವತಂತ್ರ)
ರಾಜೀವ್ ಪ್ರತಾಪ್ ರೂಡಿ - ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ, ಸಂಸದೀಯ ವ್ಯವಹಾರ (ಸ್ವತಂತ್ರ)

ಪ್ರಕಾಶ್ ಜಾವಡೇಕರ್ - ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ  (ಸ್ವತಂತ್ರ)
ನಿರ್ಮಲಾ ಸೀತಾರಾಮ್ -  ವಾಣಿಜ್ಯ ಮತ್ತು ಕೈಗಾರಿಕೆ (ಸ್ವತಂತ್ರ)

ಡಾ. ಮಹೇಶ್ ಶರ್ಮ  -ಸಂಸ್ಕೃತಿ ಮತ್ತು ಪ್ರವಾಸೋದ್ಯಮ (ಸ್ವತಂತ್ರ)  ಹಾಗೂ ನಾಗರಿಕ ವಿಮಾನಯಾನ
ಮುಖ್ತಾರ್ ಅಬ್ಬಾಸ್ ನಖ್ವೀ -ಅಲ್ಪಸಂಖ್ಯಾತ ವ್ಯವಹಾರ, ಸಂಸದೀಯ ವ್ಯವಹಾರ

ರಾಮ್ ಕೃಪಾಲ್ ಯಾದವ್ -ಕುಡಿವ ನೀರು ಮತ್ತು ನೈರ್ಮಲ್ಯ
ಎಚ್.ಪಿ. ಚೌಧರಿ -  ಗೃಹ
ಸನ್ವರ್ ಲಾಲ್ ಜಾಟ್ -  ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ
ಮೋಹನ್ ಕುಂದಾರಿಯಾ - ಕೃಷಿ
ಗಿರಿರಾಜ್ ಸಿಂಗ್ -ಸಣ್ಣ ಮತ್ತು ಮಧ್ಯಮ ಮತ್ತು ಸೂಕ್ಷ್ಮ  ಕೈಗಾರಿಕೆ
ಹಂಸರಾಜ್ ಅಹಿರ್ -ರಾಸಾಯನಿಕ ಮತ್ತು  ರಸಗೊಬ್ಬರ
ಜಿ.ಎಂ. ಸಿದ್ದೇಶ್ವರ - ಭಾರಿ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ದಿಮೆ

ಮನೋಜ್ ಸಿನ್ಹಾ ರೈಲ್ವೆ
ರಾಮ್ ಶಂಕರ್ ಕಥೇರಿಯಾ- ಮಾನವ ಸಂಪನ್ಮೂಲ ಅಭಿವೃದ್ಧಿ
ವೈ.ಎಸ್. ಚೌಧರಿ  -ವಿಜ್ಞಾನ ಮತ್ತು ತಂತ್ರಜ್ಞಾನ , ಭೂವಿಜ್ಞಾನ
ಜಯಂತ್ ಸಿನ್ಹಾ -ಹಣಕಾಸು

ರಾಜ್ಯವರ್ಧನ್ ರಾಥೋಡ್  -ವಾರ್ತಾ ಮತ್ತು ಪ್ರಸಾರ
ಬಾಬುಲ್ ಸುಪ್ರಿಯಾ -ನಗರಾಭಿವೃದ್ಧಿ, ವಸತಿ ಮತ್ತು  ಬಡತನ ನಿರ್ಮೂಲನೆ
ಸಾಧ್ವಿ ನಿರಂಜನ್ - ಜ್ಯೋತಿ ಆಹಾರ ಸಂಸ್ಕರಣಾ ಕೈಗಾರಿಕೆ
ವಿಜಯ್  ಸಂಪ್ಲ  -ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com