ಸಾಂದರ್ಭಿಕ ಚಿತ್ರ
ದೇಶ
ಕೊಡೈಕೆನಾಲ್ ನಲ್ಲಿ ಭೀಕರ ರಸ್ತೆ ಅಪಘಾತ: 9 ಮಂದಿ ದುರ್ಮರಣ
ಹಾಲಿನ ಟ್ಯಾಂಕರ್ ಗೆ ಟೊಯೋಟಾ ಕ್ವಾಲಿಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ 9 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ...
ದಿಂಡಿಗಲ್: ಹಾಲಿನ ಟ್ಯಾಂಕರ್ ಗೆ ಟೊಯೋಟಾ ಕ್ವಾಲಿಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ 9 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಕೊಡೈಕೆನಾಲ್ ಬಳಿ ನಡೆದಿದೆ.
ತಮಿಳುನಾಡಿನ ದಿಂಡಿಗಲ್ ಬಳಿ ಇಱುವ ವತ್ತಲಗುಂಡು ರಸ್ತೆಯ ಸಿದ್ದಯ್ಯನಕೋಟೆ ಬಳಿ ಈ ದುರಂತ ಸಂಭವಿಸಿದ್ದು, ಟೊಯೋಟಾ ಕ್ವಾಲಿಸ್ ನಲ್ಲಿದ್ದ 9 ಜನರು ದುರ್ಮರಣ ಹೊಂದಿದ್ದಾರೆ.
ಮೃತರೆಲ್ಲರೂ ತಮಿಳುನಾಡಿನ ಅರವಕುಂಚಿ ನಿವಾಸಿಗಳಾಗಿದ್ದು, ಕೊಡೈಕೆನಾಲ್ ನಿಂದ ಸಿದ್ದಯ್ಯಕೋಟೆಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಭೀಕರ ರಸ್ತೆ ಅಪಘಾತವಾಗಿದೆ.
ಓರ್ವನಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ