

ಲಂಡನ್: ಬ್ರಿಟನ್ನ ಸಂಡರ್ಲ್ಯಾಂಡ್ ನಿವಾಸಿಯಾಗಿರುವ ಕೀತ್ ಮೆಕ್ಡನಾಲ್ಡ್ ಎಂಬಾತನ ವಯಸ್ಸು 29. ಈತ 15 ಮಕ್ಕಳ ಅಪ್ಪ ಎಂದರೆ ನೀವು ನಂಬಲೇ ಬೇಕು. 15 ಮಕ್ಕಳನ್ನು ಈತ ದತ್ತು ತೆಗೆದುಕೊಂಡದ್ದೇನೂ ಅಲ್ಲ. ಈತನದ್ದೇ ಸ್ವಂತ ಮಕ್ಕಳು.
ಅದು ಹೇಗೆ ಸಾಧ್ಯ ಅಂತೀರಾ? ಈ ಮಾಡರ್ನ್ ಕಾಸನೋವಾ 10 ಹೆಂಗಸರೊಂದಿಗೆ ದೈಹಿಕ ಸಂಬಂಧ ಬೆಳೆಸಿ 15 ಮಕ್ಕಳಿಗೆ ಅಪ್ಪನಾಗಿದ್ದಾನೆ. ಮುಖ್ಯವಾದ ವಿಷ್ಯ ಏನಪ್ಪಾ ಅಂದ್ರೆ, ಈತ ಇಲ್ಲಿಯವರೆಗೆ ಮದುವೆಯಾಗಿಲ್ಲ!
ಈತ 15 ನೇ ವಯಸ್ಸಿನಲ್ಲಿ ಮೊದಲ ಬಾರಿ ಅಪ್ಪನಾದ. 20 ವರ್ಷವಾದಾಗ 6 ಮಕ್ಕಳ ಅಪ್ಪನಾದ. ಮಕ್ಕಳ ಅಮ್ಮಂದಿರೆಲ್ಲ ಈಗಲೂ ಕೀತ್ನ ಗರ್ಲ್ಫ್ರೆಂಡ್ಸ್ಗಳಾಗಿಯೇ ಇದ್ದಾರೆ. ತನ್ನ ಮಕ್ಕಳ ಅಮ್ಮಂದಿರಾದ 10 ಮಹಿಳೆಯರಲ್ಲಿ ಒಬ್ಬಳೊಂದಿಗೆ ಮಾತ್ರ ಕೀತ್ ಈಗಲೂ ಸಂಬಂಧವನ್ನಿಟ್ಟುಕೊಂಡಿದ್ದಾನಂತೆ.
ಇಷ್ಟೊಂದು ಮಕ್ಕಳು ಮಾಡಿಕೊಂಡಿದ್ದರೂ ಆ ಮಕ್ಕಳನ್ನು ನೋಡಿಕೊಳ್ಳುವ ಖರ್ಚಿನ ಬಗ್ಗ ಕೀತ್ ತಲೆಕೆಡಿಸಿಕೊಂಡಿಲ್ಲ. ಈತ ಪಕ್ಕಾ ಸೋಮಾರಿ. ಕೆಲಸ ಮಾಡುವುದೆಂದರೆ ಇವನಿಗ ಸಿಕ್ಕಾಪಟ್ಟೆ ಬೇಜಾರಂತೆ. ಕಂಪ್ಯೂಟರ್ ಗೇಮ್ ಆಡುವುದೆಂದರೆ ಇವನಿಗೆ ತುಂಬಾ ಇಷ್ಟ.
ಹಾಗಾದರೆ ಮಕ್ಕಳ ಗತಿ? ಸರ್ಕಾರವೇ ಮಕ್ಕಳ ಖರ್ಚು ನೋಡಿಕೊಳ್ಳುವಾಗ ನಾನ್ಯಾಕೆ ಈ ಬಗ್ಗೆ ತಲೆಕೆಡಿಸಿಕೊಳ್ಳಲಿ? ಅಂತಾನೆ ಈತ. ಆದಾಗ್ಯೂ, ಈತ ಎಷ್ಟು ಮಹಿಳೆಯರೊಂದಿಗೆ ಸಂಬಂಧವಿರಿಸಿಕೊಂಡಿದ್ದ ಎಂಬುದರ ಬಗ್ಗೆಯೂ ಇವನಿಗ ಸರಿಯಾದ ಲೆಕ್ಕ ಗೊತ್ತಿಲ್ಲವಂತೆ. ಇತ್ತೀಚೆಗಷ್ಟೇ ತನ್ನ 16ನೇ ಮಗುವಿಗೆ ಜನ್ಮ ನೀಡಲಿದ್ದ ಹುಡುಗಿಯೊಂದಿಗೆ ಬ್ರೇಕ್ ಅಪ್ ಮಾಡಿಕೊಂಡಿದ್ದಾನೆ.
ಅಂದಹಾಗೆ ಇಷ್ಟೊಂದು ಹುಡುಗಿಯರನ್ನು ಹೇಗೆ ಒಲಿಸಿಕೊಂಡಿದ್ದಿ? ಎಂಬ ಪ್ರಶ್ನೆಗೆ ಕೀತ್ ಉತ್ತರ ಹೀಗಿದೆ. ಹುಡುಗಿಯರನ್ನು ಬಸ್ ಸ್ಟಾಪ್ನಲ್ಲಿ ಪಟಾಯಿಸ್ತೀನಿ. ಫೋನ್ ನಂಬರ್ ತೆಗೆದುಕೊಂಡು ಮೆಸೇಜ್ ಮಾಡ್ತೀನಿ. ಅವರು ಓಕೆ ಅಂದ್ರೆ...ಐ ಆ್ಯಮ್ ಓಕೆ.
ಕೆಲವು ದಿನಗಳ ಹಿಂದೆಯಷ್ಟೇ 40 ಕಿಡ್ಸ್ ಬೈ 40 ವುಮೆನ್ ಎಂಬ ಸಾಕ್ಷ್ಯಚಿತ್ರದಲ್ಲಿ ಕೀತ್ ಕಾಣಿಸಿಕೊಂಡಿದ್ದನು.