ವಿಚಾರಣೆಗೆ ಹಾಜರಾಗಿ ಇಲ್ಲವೇ ವಾರೆಂಟ್ ಎದುರಿಸಿ ಸೈಫ್ ಗೆ ನ್ಯಾಯಾಲಯ ಎಚ್ಚರಿಕೆ

ಬಾಲಿವುಡ್ ನಟ ಸೈಫ್ ಅಲಿಖಾನ್ ಅನಿವಾಸಿ ಭಾರತೀಯನ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ವಿಚಾರಣೆಗೆ ಹಾಜರಾಗಿ ಇಲ್ಲವೇ ವಾರೆಂಟ್ ಎದುರುಸಿ ಎಂದು ಸೋಮವಾರ...
ಬಾಲಿವುಡ್ ನಟ ಸೈಫ್ ಅಲಿಖಾನ್
ಬಾಲಿವುಡ್ ನಟ ಸೈಫ್ ಅಲಿಖಾನ್

ಮುಂಬೈ: ಬಾಲಿವುಡ್ ನಟ ಸೈಫ್ ಅಲಿಖಾನ್ ಅನಿವಾಸಿ ಭಾರತೀಯನ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ವಿಚಾರಣೆಗೆ ಹಾಜರಾಗಿ ಇಲ್ಲವೇ ವಾರೆಂಟ್ ಎದುರುಸಿ ಎಂದು ಸೋಮವಾರ ಖಡಕ್ ಎಚ್ಚರಿಕೆ ನೀಡಿದೆ.

2012 ಫೆಬ್ರವರಿ 22 ರಂದು ಸೈಫ್ ಅಲಿಖಾನ್ ಪತ್ನಿ ಕರೀನಾ ಕರಿಷ್ಮಾ, ಮಲೈಕಾ ಅರೋರಾ ಖಾನ್ ಮತ್ತು ಇತರೆ ಸ್ನೇಹಿತರೊಂದಿಗೆ ತಾಜ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು.ಅದೇ ದಿನ ಅನಿವಾಸಿ ಭಾರತೀಯ ಇಕ್ಬಾಲ್ ಶರ್ಮಾ ಅವರು ತಮ್ಮ ಕುಟುಂಬ ಸಮೇತ ರಾತ್ರಿ ಭೋಜನಕ್ಕಾಗಿ ಈ ಹೋಟೆಲ್‌ಗೆ ಬಂದಿದ್ದಾರೆ.ಈ ಸಂದರ್ಭದಲ್ಲಿ ಪಕ್ಕದ ಟೇಬಲ್‌ನಲ್ಲಿದ್ದ ಸೈಫ್ ತಮ್ಮ ಸ್ನೇಹಿತರೊಂದಿಗೆ ಕೂಗಾಡುತ್ತಿದ್ದರು. ಶಾಂತಿ ಬೇಕಾದರೆ ಗ್ರಂಥಾಲಯಕ್ಕೆ ಹೋಗು ಎಂದು ಸೈಫ್ ಹೇಳಿದ್ದಾರೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿತ್ತು. ಸುಮ್ಮನಿರಿ ಎಂದ ಮಾತ್ರಕ್ಕೆ ಸೈಫ್ ಮತ್ತು ಅವರ ಇಬ್ಬರು ಸ್ನೇಹಿತರು ನನಗೂ ಹಾಗೂ ನನ್ನ ಮಾವನ ಮೇಲೆ ಹಲ್ಲೆ ಮಾಡಿದ್ದಾರೆ. ತದ ನಂತರ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಇಕ್ಬಾಲ್ ಶರ್ಮಾ ದೂರು ದಾಖಲಿಸಿದ್ದರು.

ಪ್ರಕರಣ ಸಂಬಂಧ ಸೈಫ್ ಅಲಿಖಾನ್ ಹಾಗೂ ಅವರ ಇಬ್ಬರು ಗೆಳೆಯರ ವಿರುದ್ದ ಸೆಕ್ಷನ್ 325 (ಹಲ್ಲೆ) ಮತ್ತು 34 (ಸಾಮಾನ್ಯ ಉದ್ದೇಶ) ಪ್ರಕರಣ ದಾಖಲಾಗಿತ್ತು. ನಂತರ ಜಾಮೀನಿನ ಮೇಲೆ ಎಲ್ಲರೂ ಹೊರ ಬಂದಿದ್ದರು.

ಈ ಪ್ರಕರಣವನ್ನು ವಿಚಾರಣೆ ನಡೆಸುತ್ತಿರುವ ಸ್ಥಳೀಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಪ್ರಕರಣ ಸಂಬಂಧ ಈ ವರೆಗೂ ನಡೆದ ಯಾವುದೇ ವಿಚಾರಣೆಯಲ್ಲೂ ಹಾಜರಾಗದ ಕಾರಣ ಮಾ. 19 ರಂದು ನಡೆದ ವಿಚಾರಣೆ ವೇಳೆ ಮುಂದಿನ ವಿಚಾರಣೆಯಲ್ಲಿ ಸೈಫ್ ಅಲಿಖಾನ್ ಹಾಜರಾಗುವಂತೆ ಸೂಚನೆ ನೀಡಿತ್ತು. ಆದರೆ ನಿನ್ನೆ ನಡೆದ ವಿಚಾರಣೆ ವೇಳೆ ಸೈಫ್ ಅವರು ಶೂಟಿಂಗ್ ಇದ್ದ ಕಾರಣ ವಿದೇಶಕ್ಕೆ ಹೋಗಿದ್ದಾರೆ ಎಂದು ಸೈಫ್ ಪರ ವಕೀಲರು ಸಬೂಬು ಹೇಳಿದ್ದರು. ಈ ಪ್ರತಿಕ್ರಿಯೆಗೆ ತೀವ್ರ ಕೋಪಗೊಂಡ ನ್ಯಾಯಾಲಯವು ಮುಂದಿನ ವಿಚಾರಣೆಗೆ ಸೈಫ್ ಅಲಿಖಾನ್ ಹಾಜರಾಗದಿದ್ದರೆ ವಾರೆಂಟ್ ಜಾರಿ ಮಾಡಲಾಗುವುದು ಎಂದು ಎಚ್ಚರಿಕೆ ಸಂದೇಶವನ್ನು ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com