ಗಡಿಗಿಂತ ಹೆಚ್ಚು ಬೈಕ್ ಅಪಘಾತದಲ್ಲಿ ಬಿಎಸ್‌ಎಫ್ ಯೋಧರು ಸಾವು!

ಸಾಂದರ್ಭಿಕ ಚಿತ್ರ - ಎಪಿ
ಸಾಂದರ್ಭಿಕ ಚಿತ್ರ - ಎಪಿ

ನವದೆಹಲಿ: ಇತ್ತೀಚಿಗೆ ದೇಶ ಕಾಯುವ ಗಡಿ ರಕ್ಷಣಾ ಪಡೆ(ಬಿಎಸ್‌ಎಫ್)ಯ ಯೋಧರು ಗಡಿಯಲ್ಲಿ ಸಾಯುವುದಕ್ಕಿಂತ ನಾಲ್ಕು ಪಟ್ಟು ಯೋಧರು ರಜೆಯಲ್ಲಿದ್ದಾಗ ಬೈಕ್ ಅಪಘಾತದಲ್ಲಿ ಸಾವನ್ನಪ್ಪುತ್ತಿರುವ ಆಘಾತಕಾರಿ ಸಂಗತಿ ಮಂಗಳವಾರ ಹೊರ ಬಿದ್ದಿದೆ.

ಕಳೆ ವರ್ಷ ಮಾರ್ಚ್ 2014ರಿಂದ 2015 ಮಾರ್ಚ್ ವರೆಗೆ 42 ಯೋಧರು ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದರೆ, ಇದೇ ಅವಧಿಯಲ್ಲಿ ಗಡಿಯಲ್ಲಿ 12 ಯೋಧರು ಮೃತಪಟ್ಟಿದ್ದಾರೆ.

'ಬೈಕ್ ಅಪಘಾತಗಳಲ್ಲಿ ನಾವು ಪ್ರತಿ ತಿಂಗಳು ಸುಮಾರು ಐವರು ಯೋಧರನ್ನು ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಯೋಧರು ರಜೆಯಲ್ಲಿದ್ದಾಗ ಅಥವಾ ಮನೆಗೆ ತೆರಳುತ್ತಿದ್ದಾಗ ಅತಿ ಹೆಚ್ಚು ಅಪಘಾತಗಳು ಸಂಭವಿಸಿವೆ' ಎಂದು ಬಿಎಸ್‌ಎಫ್ ಮಹಾ ನಿರ್ದೇಶಕ ಡಿ.ಕೆ.ಪಾಠಕ್ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

'ನಮ್ಮ ಸಿಬ್ಬಂದಿ ನಮಗೆ ದೊಡ್ಡ ಆಸ್ತಿ ಮತ್ತು ಇಂತಹ ಘಟನೆ ಮರುಕಳುಹಿಸಬಾರದು. ಬೈಕ್ ಅಪಘಾತದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಡುತ್ತಿರುವುದು ಕಳವಳಕಾರಿ ಸಂಗತಿಯಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು' ಪಾಠಕ್ ಹೇಳಿದ್ದಾರೆ.

ರ್ಯಾಷ್ ಡ್ರೈವಿಂಗ್ ಮತ್ತು ಸುರಕ್ಷಿತ ಚಾಲನೆ ಸಂಬಂಧಿಸಿದಂತೆ ನಮ್ಮ ಯೋಧರಿಗೆ ತರಬೇತಿ ನೀಡಲಾಗುವುದು ಎಂದು ಸಹ ಬಿಎಸ್‌ಎಫ್ ಪೊಲೀಸ್ ಮಹಾ ನಿರ್ದೇಶಕರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com