ಸತ್ಯಂ ಹಗರಣ: ರಾಮಲಿಂಗರಾಜು ಸೇರಿ 10 ಮಂದಿ ವಿರುದ್ಧ ಆರೋಪ ಸಾಬೀತು

ಬಹುಕೋಟಿ ಸತ್ಯಂ ಕಂಪ್ಯೂಟರ್ ಸರ್ವೀಸಸ್ ಲಿಮಿಟೆಡ್(ಎಸ್ ಸಿಎಸ್ಎಲ್ )ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯ ಗುರುವಾರ ಪ್ರಕಟಿಸಿದ್ದು...
ರಾಮಲಿಂಗರಾಜು
ರಾಮಲಿಂಗರಾಜು

ಹೈದರಾಬಾದ್: ಬಹುಕೋಟಿ ಸತ್ಯಂ ಕಂಪ್ಯೂಟರ್ ಸರ್ವೀಸಸ್ ಲಿಮಿಟೆಡ್(ಎಸ್ ಸಿಎಸ್ಎಲ್ )ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯ ಗುರುವಾರ ಪ್ರಕಟಿಸಿದ್ದು, ಸತ್ಯಂ ಕಂಪ್ಯೂಟರ್ ಸಂಸ್ಥಾಪಕ ರಾಮಲಿಂಗರಾಜು ಸೇರಿ ಹತ್ತು ಮಂದಿ ತಪ್ಪಿತಸ್ಥರು ಎಂದು ತೀರ್ಪು ನೀಡಿದೆ.

ಹಗರಣ ಸಂಬಂಧ ಕಳೆದ ಡಿ.23ರಂದು ಅಂತಿಮವಾಗಿ ವಿಚಾರಣೆ ನಡೆಸಿ ವಾದ-ವಿವಾದಗಳನ್ನು ಆಲಿಸಿದ್ದ ವಿಶೇಷ ನ್ಯಾಯಾಲಯ, ಮಾ.9ರಂದು ಅಂತಿಮ ತೀರ್ಪು ಪ್ರಕಟಿಸುವುದಾಗಿ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ತೀರ್ಪು ಇಂದು ಹೊರ ಬಿದ್ದಿದ್ದು, ನ್ಯಾಯಾಮೂರ್ತಿ ಬಿವಿಎಲ್‌‌‌‌ಎನ್‌‌ ಚಕ್ರವರ್ತಿ ಅವರು ಪ್ರಕರಣ ಹತ್ತು ಮಂದಿ ವಿರುದ್ಧ ಆರೋಪ ಸಾಬೀತಾಗಿದ್ದು, ತಪ್ಪಿತಸ್ಥರು ಎಂದು ತೀರ್ಪು ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ರಾಷ್ಟ್ರದ ಅತಿದೊಡ್ಡ ಲೆಕ್ಕಾಚಾರ ವಂಚನೆ ಎಂದೇ ಪರಿಗಣಿಸಲಾಗಿರುವ ಈ ಹಗರಣ 2009ರ ಜನವರಿ 7ರಂದು ಬೆಳಕಿಗೆ ಬಂದಿತ್ತು. ಕಂಪೆನಿಯ ಸಂಸ್ಥಾಪಕ ಹಾಗೂ ಆಗಿನ ಅಧ್ಯಕ್ಷ ಬಿ. ರಾಮಲಿಂಗ ರಾಜು ಅವರು ಹಲವು ವರ್ಷಗಳಿಂದ ಕೋಟಿಗಟ್ಟಲೆ ರೂಪಾಯಿಗಳ ಲಾಭವನ್ನು ತೋರಿಸಿ ತಮ್ಮ ಕಂಪೆನಿಯ ಲೆಕ್ಕಪತ್ರಗಳನ್ನು ಕುಶಲತೆಯಿಂದ ನಿಭಾಯಿಸಲಾಗಿದೆ ಎಂದು ಒಪ್ಪಿಕೊಳ್ಳುವುದರೊಂದಿಗೆ ಈ ಹಗರಣ ಬಯಲಾಗಿತ್ತು.

ಸಿಬಿಐ ನ್ಯಾಯಾಲಯವು ಕಳೆದ ಆರು ವರ್ಷಗಳಿಂದ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಈ ವೇಳೆ ಸುಮಾರು 3000 ಪುಟಕ್ಕೀ ಅಧಿಕ ದಾಖಲೆ ಪತ್ರಗಳು ಹಾಗೂ 226 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಿತ್ತು. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ ಮುಖ್ಯಸ್ಥ ಬಿ. ರಾಮಲಿಂಗಾ ರಾಜು ಅವರನ್ನು ಬಂಧಿಸಲಾಗಿತ್ತು.

ಈ ಹಗರಣವನ್ನು ಲೆಕ್ಕ ವಿಭಾಗದಲ್ಲಿ ನಡೆದಿರುವ ದೇಶದ ಅತಿ ದೊಡ್ಡ ಹಗರಣ ಎಂದು ಹೇಳಲಾಗಿದ್ದು, ಇದು 2009ರಲ್ಲಿ ಬೆಳಕಿಗೆ ಬಂದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com