
ಮಣಪ್ಪುರಂ: ಯುದ್ಧ ಪೀಡಿತ ಯೆಮೆನ್ ನ ಸನಾದಲ್ಲಿ ಕೇರಳ ಮೂಲದ ವ್ಯಕ್ತಿಯೊಬ್ಬರನ್ನು ಉಗ್ರರು ಒತ್ತೆಯಾಳಾಗಿಟ್ಟುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮಣಪ್ಪುರಂ ಜಿಲ್ಲೆಯ ಸಲ್ಮಾನ್ ಅವರು ಏಳು ವರ್ಷದಿಂದ ಯೆಮೆನ್ ನಲ್ಲಿ ನೆಲೆಸಿದ್ದರು. ಪತ್ನಿ, ಐದು ಮಕ್ಕಳೂ ಅವರ ಜತೆಗಿದ್ದರು. ಮಾ.24ರಂದು ಆರು ಮಂದಿಯಿದ್ದ ಉಗ್ರರ ಗುಂಪೊಂದು ಆರು ಮಂದಿಯನ್ನು ಕರೆದೊಯ್ದಿತ್ತು. ಉಳಿದವರನ್ನು ಬಿಡುಗಡೆ ಮಾಡಲಾಯಿತಾದರೂ ಸಲ್ಮಾನ್ ಅವರ ಪತ್ತೆ ಇಲ್ಲ ಎಂದು ಪತ್ನಿ ಖಮರುನ್ನಿಸಾ ತಿಳಿಸಿದ್ದಾರೆ. ಈ ಸಂಬಂಧ ಪತ್ನಿ ಮುಖ್ಯಮಂತ್ರಿ ಒಮ್ಮನ್ ಚಾಂಡಿ ಅವರಿಗೆ ದೂರು ನೀಡಿದ್ದು, ತಕ್ಷಣ ಪ್ರಕರಣಕ್ಕೆ ಸಂಬಂಧಿಸಿ ಮಧ್ಯಪ್ರವೇಶಿಸುವಂತೆ ಸಲ್ಮಾನ್ ತಂದೆ ತಿಳಿಸಿದ್ದಾರೆ.
ಮಹಾ ವಿಪತ್ತು: ಯೆಮೆನ್‍ನಲ್ಲಿ ನಡೆಯುತ್ತಿರುವ ಸಂಘರ್ಷವನ್ನು ರೆಡ್‍ಕ್ರಾಸ್ ಮಹಾ ವಿಪತ್ತು ಎಂದು ಕರೆದಿದೆ.
ಇಂದು ಅಂತ್ಯ: ಯೆಮೆನ್‍ನಲ್ಲಿ ಸಿಲುಕಿರುವ ಭಾರತೀಯರ ವಾಯು ಮಾರ್ಗದ ಮೂಲಕ ರಕ್ಷಣಾ ಕಾರ್ಯ ಗುರುವಾರ ಅಂತ್ಯಗೊಳ್ಳಲಿದೆ. ಆದರೆ, ಕಟ್ಟ ಕಡೆಯ ಭಾರತೀಯನ ರಕ್ಷಣೆ ಮಾಡುವವರೆಗೂ ರಕ್ಷಣಾ ಕಾರ್ಯ ಮುಂದುವರೆ ಯಲಿದ್ದು, ಅವರನ್ನು ಸಮುದ್ರ ಮಾರ್ಗವಾಗಿ ವಾಪಸ್ ಕರೆತರಲಾಗುವುದು ಎಂದು ಸರ್ಕಾರ ಹೇಳಿದೆ. ಈವರೆಗೂ 4000 ಭಾರತೀಯರನ್ನು ಯೆಮೆನ್‍ನಿಂದ ಭಾರತಕ್ಕೆ ಕರೆತರಲಾಗಿದೆ.
Advertisement