
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ 9 ದಿನಗಳ ಫ್ರಾನ್ಸ್, ಜರ್ಮನಿ ಹಾಗೂ ಕೆನಡಾ ದೇಶಗಳ ಪ್ರವಾಸ ಗುರುವಾರ ಆರಂಭ ವಾಗಲಿದೆ.
`ಮೇಕ್ ಇನ್ ಇಂಡಿಯಾ'ಕನಸನ್ನು ಗುರಿಯಾಗಿಟ್ಟುಕೊಂಡೇ ಈ ಪ್ರವಾಸ ಕೈಗೊಳ್ಳುತ್ತಿರುವ ಮೋದಿ, ಮೂಲ ಸೌಲಭ್ಯ, ರಕ್ಷಣಾ ಕ್ಷೇತ್ರಗಳಲ್ಲಿ ಮೂರೂ ರಾಷ್ಟ್ರಗಳ ಉದ್ಯಮಿಗಳ ಜತೆಗೆ ಮಾತುಕತೆ ನಡೆಸಲಿದ್ದಾರೆ. ಇದರ ಜತೆಗೆ, ಫ್ರಾನ್ಸ್ ಮತ್ತು ಕೆನಡಾದಿಂದ ಅಣು ರಿಯಾಕ್ಟರ್ ಮತ್ತು ಅಣು ಇಂಧನ ಖರೀದಿಗೆ ಸಂಬಂಧಿಸಿಯೂ ಪ್ರವಾಸದ ವೇಳೆ ಚರ್ಚಿಸಲಿದ್ದಾರೆ.
ನಾವ್ ಪೆ ಚರ್ಚಾ
3 ದಿನಗಳ ಕಾಲ ಫ್ರಾನ್ಸ್ ನಲ್ಲಿ ಕಳೆಯಲಿರುವ ಮೋದಿ, ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ ಅವರೊಂದಿಗೆ ಲಾ ಸೀನ್ ನದಿಯಲ್ಲಿ ನಾವ್ ಪೇ ಚರ್ಚಾ (ಬೋಟ್ ಪ್ರಯಾಣ) ನಡೆಯಸಲಿದ್ದಾರೆ. ನಂತರ ಜರ್ಮನಿಗೆ ತೆರಳಲಿರುವ ಮೋದಿ, ಏ.12ರಂದು ಹ್ಯಾನೋವರ್ ನಲ್ಲಿ ಆಯೋಜಿಸಿರುವ ಬೃಹತ್ ವಾಣಿಜ್ಯಮೇಳವನ್ನು ಉದ್ಘಾಟಿಸಲಿದ್ದಾರೆ. ಏ.17ರಂದು ಮೋದಿ ಕೆನಡಾಗೆ ಪ್ರಯಾಣ ಬೆಳೆಸಲಿದ್ದು, ರಾಜಕಾರಣಿಗಳು ಹಾಗೂ ಉದ್ಯಮಿಗಳ ಜತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಕಳೆದ 40 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಕೆನಡಾಗೆ ಭೇಟಿ ನೀಡುತ್ತಿರುವುದು ಇದೇ ಮೊದಲು.
Advertisement