ಮೋದಿ ಆಡಳಿತ ಮಾದರಿಗಿಂತ ನನ್ನ ಆಡಳಿತ ಮಾದರಿ ಉತ್ತಮ: ಕೆಜ್ರಿವಾಲ್

ನನ್ನ ಜನಕೇಂದ್ರಿತವಾದ ಆಡಳಿತ ಮಾದರಿ ಪ್ರಧಾನಿ ನರೇಂದ್ರಮೋದಿ ಅವರ ಆಡಳಿತಕ್ಕಿಂತಲೂ ಉತ್ತಮವಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಅರವಿಂದ್ ಕೇಜ್ರಿವಾಲ್ (ಸಂಗ್ರಹ ಚಿತ್ರ)
ಅರವಿಂದ್ ಕೇಜ್ರಿವಾಲ್ (ಸಂಗ್ರಹ ಚಿತ್ರ)
Updated on

ನವದೆಹಲಿ: ನನ್ನ ಜನಕೇಂದ್ರಿತವಾದ ಆಡಳಿತ ಮಾದರಿ ಪ್ರಧಾನಿ ನರೇಂದ್ರಮೋದಿ ಅವರ ಆಡಳಿತಕ್ಕಿಂತಲೂ ಉತ್ತಮವಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ದೆಹಲಿಯಲ್ಲಿ ಮಾತನಾಡಿದ ಕೇಜ್ರಿವಾಲ್ ಅವರು, ಕೆಲವೇ ಕೆಲವು ಜನರ ಕೇಂದ್ರಿತವಾದ ಸರ್ಕಾರಕ್ಕಿಂತಲೂ ಸಮಗ್ರ ಜನಕೇಂದ್ರಿತವಾದ ನನ್ನ ಸರ್ಕಾರ ಮೋದಿ ಸರ್ಕಾರಕ್ಕಿಂತಲೂ ಆದರ್ಶವಾಗಿದೆ. ಹಲವು ಏಳು-ಬೀಳುಗಳ ನಡುವೆಯೇ ನಾವು ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸುವತ್ತ ಮುನ್ನಡೆಯುತ್ತಿದ್ದೇವೆ. ಆಮ್ ಆದ್ಮಿ ಪಕ್ಷದಲ್ಲಿ ಉಂಟಾದ ಕೆಲವು ಗೊಂದಲಗಳಿಂದ ಸರ್ಕಾರದ ಕಾರ್ಯಕ್ರಮಗಳು ಜನರಿಗೆ ತಲುಪಿದ್ದರೂ ಮಾಧ್ಯಮಗಳು ಅದನ್ನು ಗುರುತಿಸುವಲ್ಲಿ ವಿಫಲವಾಗಿವೆ. 50 ದಿನಗಳ ಆಡಳಿತ ವ್ಯವಸ್ಥೆಯನ್ನು ಸರಿದಾರಿಗೆ ತಂದಿರುವ ಹೆಮ್ಮೆ ನಮಗಿದೆ ಎಂದು ಹೇಳಿದ್ದಾರೆ.

ಮೋದಿ ಸರ್ಕಾರ ಉತ್ತಮ ಆಡಳಿತ ನೀಡಿದೆ ಎಂದು ಜನರು ಹೇಳುತ್ತಿದ್ದಾರೆ ಎಂದು ಆಪಕ್ಷದ ನಾಯಕರು ಹೇಳುತ್ತಿದ್ದಾರೆ. ಆದರೆ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಜನತೆ 67 ಸೀಟುಗಳನ್ನು ನೀಡಿದ ಜನ, ಬಿಜೆಪಿಗೆ ಕೊಟ್ಟಿದ್ದು ಕೇವಲ 3 ಸ್ಥಾನ ಮಾತ್ರ. ಹಾಗಾದರೆ ಯಾವ ಸರ್ಕಾರ ಉತ್ತಮವಾಗಿದೆ..? ಎಂದು ಕೇಜ್ರಿವಾಲ್ ಪ್ರಶ್ನಿಸಿದರು. ನಾನು ಜನರ ಮಧ್ಯೆ ಇದ್ದು, ಜನಕೇಂದ್ರಿತ ಅಧಿಕಾರ ನಡೆಸುತ್ತಿದ್ದೇನೆ. ಆದರೆ, ಮೋದಿ ದೇಶದ ಕೆಲವೇ ಕೆಲವು ಶ್ರೀಮಂತ ಜನರ ಮಧ್ಯೆ ಆಡಳಿತ ನಡೆಸುತ್ತಿದ್ದಾರೆ ಎಂದು ಕೇಜ್ರಿವಾಲ್ ವ್ಯಂಗ್ಯವಾಡಿದರು.

ಜನಸಾಮಾನ್ಯರಿಗೆ ಸರ್ಕಾರದ ಯೋಜನೆಗಳನ್ನು ಸರಿಯಾಗಿ ತಲುಪಿಸುವುದು ನಮ್ಮ ಕರ್ತವ್ಯ. ಕಾರ್ಪೊರೇಟರ್‌ಗಳಿಗೆ ರತ್ನಗಂಬಳಿ ಹಾಕಿ ಅವಕಾಶ ನೀಡುವುದು ಬಿಜೆಪಿ ಕೆಲಸ. ಚುನಾವಣೆಯಲ್ಲಿ ನೀಡಿರುವ ಎಲ್ಲ ಭರವಸೆಗಳನ್ನೂ ಕಾಲಮಿತಿಯೊಳಗೆ ಈಡೇರಿಸುವ ಆಶ್ವಾಸನೆ ಕೊಟ್ಟಿದ್ದಾರೆ. ಅಧಿಕಾರಿಗಳನ್ನು ಸರಿದಾರಿಗೆ ತರುವುದು ಅಷ್ಟು ಸುಲಭವಲ್ಲ ಎಂದು ನನಗೆ ಮನವರಿಕೆಯಾಗಿದೆ. ಆದರೂ ದೆಹಲಿಯಲ್ಲಿ ತೆರಿಗೆ ಸಂಗ್ರಹಕ್ಕೆ ನಾವು ಹೆಚ್ಚು ಒತ್ತು ನೀಡಿದ್ದರಿಂದ ನಿರೀಕ್ಷಿತ ಗುರಿ ತಲುಪುತ್ತಿದ್ದೇವೆ. ಮುಂದಿನ ಐದು ವರ್ಷದೊಳಗೆ ನಾವು ಜನಮೆಚ್ಚುವಂತಹ ಆಡಳಿತ ನೀಡುತ್ತೇವೆಂದು ಆಶ್ವಾಸನೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com