ವೈರತ್ವ ಮರೆತು ಜೊತೆಗೂಡಿದ ಒಬಾಮ-ಕ್ಯಾಸ್ಟ್ರೋ

ಪರಸ್ಪರ ಬದ್ಧ ವೈರಿಗಳೆಂದೇ ಕರೆಯಲಾಗುತ್ತಿದ್ದ ಅಮೆರಿಕ-ಕ್ಯೂಬಾ ದೇಶಗಳು ದಶಕಗಳ ಬಳಿಕ ಇದೇ ಮೊದಲ ಬಾರಿಗೆ ಒಂದಾಗಿದ್ದು...
ಪರಸ್ಪರ ಹಸ್ತಲಾಘವ ಮಾಡುತ್ತಿರುವ ಒಬಾಮ-ರೌಲ್ ಕ್ಯಾಸ್ಟ್ರೋ
ಪರಸ್ಪರ ಹಸ್ತಲಾಘವ ಮಾಡುತ್ತಿರುವ ಒಬಾಮ-ರೌಲ್ ಕ್ಯಾಸ್ಟ್ರೋ
Updated on

ಪನಾಮ: ಪರಸ್ಪರ ಬದ್ಧ ವೈರಿಗಳೆಂದೇ ಕರೆಯಲಾಗುತ್ತಿದ್ದ ಅಮೆರಿಕ-ಕ್ಯೂಬಾ ದೇಶಗಳು ದಶಕಗಳ ಬಳಿಕ ಇದೇ ಮೊದಲ ಬಾರಿಗೆ ಒಂದಾಗಿದ್ದು, ಉಭಯ ದೇಶಗಳ ಅಧ್ಯಕ್ಷರು ಕಾರ್ಯಕ್ರಮವೊಂದರಲ್ಲಿ ಹಸ್ತಲಾಘವ ಮಾಡಿದ್ದಾರೆ.

ಪನಾಮ ನಗರ ಇಂತಹುದೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಪನಾಮ ನಗರದಲ್ಲಿ ಆಯೋಜಿಸಲಾಗಿರುವ ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮತ್ತು ಕ್ಯೂಬಾ ಅಧ್ಯಕ್ಷ ರೌಲ್ ಕ್ಯಾಸ್ಟ್ರೋ ಪರಸ್ಪರ ಹಸ್ತಲಾಘವ ಮಾಡುವ ಮೂಲಕ ಹೊಸ ಸ್ನೇಹ-ಸೌಹಾರ್ಧತೆಗೆ ಮುಂದಾಗಿದ್ದಾರೆ. ಸತತ 21 ವರ್ಷಗಳ ಬಳಿಕ ಕ್ಯೂಬಾ ಅಧ್ಯಕ್ಷರೊಬ್ಬರು ಶೃಂಗಸಭೆಯೊಂದರಲ್ಲಿ ಪಾಲ್ಗೊಂಡಿದ್ದು, ಸಾಂಕೇತಿಕವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ರೌಲ್ ಕ್ಯಾಸ್ಟ್ರೋ ಹಸ್ತಲಾಘವ ಮಾಡಿದ್ದಾರೆ.

ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅಮೆರಿಕ ಅಧಿಕಾರಿಗಳು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಕ್ಯೂಬಾ ನಾಯಕ ರೌಲ್ ಕ್ಯಾಸ್ಟ್ರೋ ಶುಕ್ರವಾರ ರಾತ್ರಿ ಕೈಕುಲುಕುವ ಮೂಲಕ ಹೊಸ ಮೈಲಿಗಲ್ಲು ನೆಟ್ಟಂತಾಗಿದೆ ಎಂದು ಹೇಳಿದ್ದಾರೆ. ಇನ್ನು ಈ ಹಿಂದೆ 1994ರಲ್ಲಿ ನಡೆದಿದ್ದ ಶೃಂಗಸಭೆಯಲ್ಲಿ ಕ್ಯೂಬಾ ಅಧ್ಯಕ್ಷರು ಕೊನೆಯ ಬಾರಿಗೆ ಅಮೆರಿಕ ಪಾಲ್ಗೊಂಡಿದ್ದರು. ಆ ಬಳಿಕ ಇದೇ ಮೊದಲ ಬಾರಿಗೆ ಪನಾಮ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದಾರೆ.

ರಾಜಕೀಯ ಕಾರಣಗಳಿಂದಾಗಿ 1961ರಿಂದಲೂ ಕ್ಯೂಬಾ ಮತ್ತು ಅಮೆರಿಕ ಸಂಬಂಧ ತೀರ ಹಳಸಿತ್ತು. ಕ್ಯೂಬಾ ಮೇಲೆ ಹಿಡಿತ ಸಾಧಿಸಬೇಕು ಎನ್ನುವ ಅಮೆರಿಕದ ಆಸೆಗೆ ಕ್ಯೂಬಾ ತಣ್ಣೀರು ಸುರಿದಿತ್ತು. ಸ್ವತಂತ್ರ ಕ್ಯೂಬಾ ದೇಶದ ಕನಸು ಕಂಡಿದ್ದ ಹೋರಾಟಗಾರರು ಅಮೆರಿಕದ ವಿರುದ್ಧದ ಸೆಟೆದು ನಿಂತರು. ದಶಕಗಳಿಂದಲೂ ಉಭಯ ದೇಶಗಳೊಡನೆ ನಡೆಯುತ್ತಿರುವ ಈ ಶೀಥಲಯುದ್ಧಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ 2014ರ ಡಿಸೆಂಬರ್ 17ರಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮತ್ತು ಕ್ಯೂಬಾ ರೌಲ್ ಕ್ಯಾಸ್ಟ್ರೋ ಮುಂದಾಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com