
ಮುಜಾಫರ್‍ನಗರ: ಮರ್ಯಾದಾ ಹತ್ಯೆಯನ್ನು ಪ್ರೋತ್ಸಾಹಿಸುತ್ತಿದ್ದ ಖಾಪ್ ಪಂಚಾಯತಿ ಇದೀಗ ಪ್ರಶಂಸನೀಯ ಕಾರ್ಯವೊಂದನ್ನು ಮಾಡಿದೆ.
ವರದಕ್ಷಿಣೆ ಪಡೆದು ಮದುವೆಯಾಗ ಹೊರಟಿದ್ದ ಯೋನೊಬ್ಬನಿಗೆ 2 ವರ್ಷಗಳ ಕಾಲ ಮದುವೆಯಾಗದಂತೆ ಈ ಪಂಚಾಯತಿ ನಿಷೇಧ ಹೇರಿದೆ.
ಜತೆಗೆ ರು.81 ಸಾವಿರ ದಂಡ ಕೂಡ ವಿಧಿಸಿದೆ. ವರದಕ್ಷಿಣೆ ರೂಪದಲ್ಲಿ ಕಾರನ್ನು ನೀಡುವಂತೆ ಆತ ಬೇಡಿಕೆ ಇಟ್ಟಿದ್ದ ಎಂಬ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪಂಚಾಯಿತಿ ಹೇಳಿದೆ.
Advertisement