ಚೀನಾ ಗಡಿಯಲ್ಲಿ ರೈಲು ನಿಲ್ದಾಣ: ಮನೋಹರ್ ಪರಿಕ್ಕರ್

ಅರುಣಾಚಲ ಪ್ರದೇಶದ ಚೀನಾ-ಭಾರತ ಗಡಿಯಲ್ಲಿ ರೈಲು ನಿಲ್ದಾಣವನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಅರುಣಾಚಲ ಪ್ರದೇಶದ ಚೀನಾ-ಭಾರತ ಗಡಿಯಲ್ಲಿ ರೈಲು ನಿಲ್ದಾಣವನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ.

ಯೋಜನೆ ಕುರಿತಂತೆ ಈಗಾಗಲೇ ಕೇಂದ್ರ ಸರ್ಕಾರ ಪ್ರಸ್ತಾವವೊಂದನ್ನು ಮುಂದಿಟ್ಟಿದ್ದು, ಶೀಘ್ರದಲ್ಲಿಯೇ ಇದಕ್ಕೆ ಸಹಿ ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು, "ಯೋಜನೆ ಅನುಷ್ಠಾನದ ಬಗ್ಗೆ ರೈಲ್ವೆ ಸಚಿವ ಸುರೇಶ್‌ ಪ್ರಭು ಅವರೊಂದಿಗೆ ಮಾತನಾಡಿದ್ದೇನೆ. ಕರುಡು ಸಿದ್ಧವಾಗಿದ್ದು ಅದಕ್ಕೆ ಎಲ್ಲರ ಒಪ್ಪಿಗೆ ಪಡೆದು ಸಹಿ ಹಾಕಲಾಗುವುದು ಎಂದು ತಿಳಿಸಿದ್ದಾರೆ.

"ಗಡಿಯಲ್ಲಿ ಭಾರತ  ರೈಲು ನಿಲ್ದಾಣ ನಿರ್ಮಿಸಿದ್ದೇ ಆದರೆ, ಭಾರತದ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲಾಗಲಿದೆ. ಅಲ್ಲದೆ ಗಡಿಯಲ್ಲಿರುವ ಸಾವಿರಾರು ನಾಗರೀಕರಿಗೆ
ಅನುಕೂಲಕಾರಿಯಾಗಲಿದೆ. ನಮ್ಮ ದೇಶದ ಘನತೆ ಮತ್ತು ಗೌರವವನ್ನು ಎತ್ತಿ ಹಿಡಿಯಬೇಕಾಗಿದೆ. ಅದಕ್ಕೆ ಈ ಯೋಜನೆ ಪೂರಕವಾಗಲಿದೆ" ಎಂದು ಪರಿಕ್ಕರ್ ಹೇಳಿದರು.

ಇನ್ನು ನೇಪಾಳಕ್ಕೆ ಸಂಪರ್ಕ ನೀಡಲು ಮೌಂಟ್ ಎವರೆಸ್ಟ್ ಪರ್ವತದ ತಪ್ಪಲಿನಲ್ಲಿ ಹೊಸ ಸುರಂಗ ಮಾರ್ಗ ಕೊರೆದು ಮಾರ್ಗ ನಿರ್ಮಿಸುತ್ತೇವೆ ಎಂದು ಈ ಹಿಂದೆ ಚೀನಾ ಹೇಳಿತ್ತು. ಈ ಹೇಳಿಕೆ ಹೊರ ಬೀಳುತ್ತಿದ್ದಂತೆಯೇ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಇಂತಹ ಸಂದರ್ಭದಲ್ಲಿ ರಕ್ಷಣಾ ಸಚಿವ ಹೇಳಿಕೆ ಮಹತ್ವ ತಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com