ಕೋತಿ ಅಥವಾ ನಾಯಿ ಕಚ್ಚಿದರೆ 2 ಲಕ್ಷ ಪರಿಹಾರ

ಕೋತಿ ಅಥವಾ ನಾಯಿ ದಾಳಿಗೆ ಒಳಗಾದವರಿಗೆ ಸರ್ಕಾರ 2 ಲಕ್ಷ ರುಪಾಯಿ ಪರಿಹಾರ ನೀಡಬೇಕೆಂದು ಉತ್ತರಾಖಂಡ್ ಹೈಕೋರ್ಟ್...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನೈನಿತಾಲ್: ಕೋತಿ ಅಥವಾ ನಾಯಿ ದಾಳಿಗೆ ಒಳಗಾದವರಿಗೆ ಸರ್ಕಾರ 2 ಲಕ್ಷ ರುಪಾಯಿ ಪರಿಹಾರ ನೀಡಬೇಕೆಂದು ಉತ್ತರಾಖಂಡ್ ಹೈಕೋರ್ಟ್ ಮಹತ್ವದ ತೀರ್ಪು ಹೊರಡಿಸಿದೆ.

ನಾಯಿ ಅಥವಾ ಕೋತಿ ದಾಳಿಗೆ ಒಳಗಾದ ವಾರದೊಳಗೆ ಜಿಲ್ಲಾ ಜಿಲ್ಲಾ ಮುನ್ಸಿಪಲ್ ಕಾರ್ಪೋರೇಶನ್ ಮತ್ತು ಸರ್ಕಾರ ಸೇರಿ ಪೀಡಿತರಿಗೆ ಪರಿಹಾರವನ್ನು ಒದಗಿಸಬೇಕು ಎಂದು ನ್ಯಾಯಮೂರ್ತಿ ಅಲೋಕ್ ಸಿಂಗ್​ ಮತ್ತು ಸರ್ವೇಶ್ ಕುಮಾರ್ ಗುಪ್ತಾ ಅವರನ್ನೊಳಗೊಂಡ ನ್ಯಾಯಪೀಠ ಆದೇಶ ನೀಡಿದೆ.

ನೈನಿತಾಲ್‌ನಲ್ಲ ಬೀದಿನಾಯಿಗಳ ಹಾವಳಿ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದ್ದು ಜನವರಿ ತಿಂಗಳೊಂದರಲ್ಲೇ 4000 ಮಂದಿಗೆ ನಾಯಿ ಕಡಿದ ವರದಿಯಾಗಿತ್ತು.

ಈ ಹಿನ್ನಲೆಯಲ್ಲಿ ನಾಯಿ ಮತ್ತು ಕೋತಿ ದಾಳಿಗೆ ತುತ್ತಾದ ಜನ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಈ ಆದೇಶ ನೀಡಿದೆ. ಅಲ್ಲದೇ, ಬೀಡಾದಿ ದನಗಳ ದಾಳಿಗೊಳಗಾದವರಿಗೂ 1 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com