ಹಿಲರಿ ಕ್ಲಿಂಟನ್
ದೇಶ
ಅಮೆರಿಕ ಅಧ್ಯಕ್ಷರ ಚುನಾವಣೆಗೆ ಹಿಲರಿ ಕ್ಲಿಂಟನ್ ಸ್ಪರ್ಧೆ
ಪನಮಾ: ಮಾಜಿ ಅಮೆರಿಕ ಕಾರ್ಯದರ್ಶಿ ಹಿಲರಿ ಕ್ಲಿಂಟನ್(67) ಅವರು 2016ರ ಅಮೆರಿಕ ಅಧ್ಯಕ್ಷರ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗಿ ಅವರು ಆಯ್ಕೆಯಾಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸ್ವತಃ ಹಿಲರಿ ಅವರೇ ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ. 2012ರಲ್ಲಿ ಹಿಲರಿ ಅವರು ಅಧ್ಯಕ್ಷಕರ ಚುನಾವಣೆಯಲ್ಲಿ ಪಕ್ಷದೊಳಗಿನ ಅಭ್ಯರ್ಥ್ಯಿಯಾಗಿ ಸ್ಪರ್ಧಿಸಿ ಒಬಾಮಾ ವಿರುದ್ಧ ಸೋತಿದ್ದರು. 4 ವರ್ಷಗಳ ಬಳಿಕ ನಡೆದ ಚುನಾವಣೆಯಲ್ಲಿ ಒಬಾಮ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಹಿಲರಿ ಕ್ಲಿಂಟ್ ನನ್ನ ಉತ್ತಮ ಸ್ನೇಹಿತೆ. ಸಾರ್ವತ್ರಿಕ ಚುನಾವಣೆಯಲ್ಲಿ ಅವರು ನನ್ನ ಬೆಂಬಲಕ್ಕೆ ನಿಂತಿದ್ದರು. ಆಕೆ ಅಮೆರಿಕಾದ ಉತ್ತಮ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಒಬಾಮ ಹೇಳಿದ್ದಾರೆ. ಅಲ್ಲದೆ ಹಿಲರಿ ಅತ್ಯುತ್ತಮ ಅಧ್ಯಕ್ಷರಾಗಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ