ಮತದಾನ ಮಾಡುವುದು ಸಾಂವಿಧಾನಿಕ ಹಕ್ಕು: ಬಿಜೆಪಿ

ವೋಟ್ ಬ್ಯಾಂಕ್ ರಾಜಕಾರಣ ತಡೆಯಲು ಮುಸ್ಲಿಮರ ಮತ ಹಕ್ಕನ್ನು ರದ್ದುಗೊಳಿಸಿ ಬೇಕು ಎಂಬ ಶಿವಸೇನೆಯ ವಿವಾದಾತ್ಮಕ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ಮತದಾನ ಮಾಡುವುದು ಸಾಂವಿಧಾನಿಕ ಹಕ್ಕು ಅದನ್ನು ಕಸಿಯುವ ಹಕ್ಕು ಯಾರಿಗೂ ಇಲ್ಲ...
ಬಿಜೆಪಿ ವಕ್ತಾರ ಶಾನವಾಜ್ ಹುಸೇನ್
ಬಿಜೆಪಿ ವಕ್ತಾರ ಶಾನವಾಜ್ ಹುಸೇನ್

ಪಾಟ್ನ: ವೋಟ್ ಬ್ಯಾಂಕ್ ರಾಜಕಾರಣ ತಡೆಯಲು ಮುಸ್ಲಿಮರ ಮತ ಹಕ್ಕನ್ನು ರದ್ದುಗೊಳಿಸಿ ಬೇಕು ಎಂಬ ಶಿವಸೇನೆಯ ವಿವಾದಾತ್ಮಕ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ಮತದಾನ ಮಾಡುವುದು ಸಾಂವಿಧಾನಿಕ ಹಕ್ಕು ಅದನ್ನು ಕಸಿಯುವ ಹಕ್ಕು ಯಾರಿಗೂ ಇಲ್ಲ ಎಂದು ಸೋಮವಾರ ಹೇಳಿದೆ.

ಈ ಕುರಿತಂತೆ ಮಾತನಾಡಿರುವ ಬಿಜೆಪಿ ವಕ್ತಾರ ಶಾನವಾಜ್ ಹುಸೇನ್, ಧರ್ಮ ರಾಜಕೀಯ ಮಾಡುವ ಕೆಲವು ಪಕ್ಷಗಳು ಈ ರೀತಿಯ ಹೇಳಿಕೆ ನೀಡುತ್ತಿವೆ. ಭಾರತದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ ಮತದಾನ ಮಾಡುವ ಹಕ್ಕುನ್ನು ನಮ್ಮ ಭಾರತ ನೀಡಿದೆ. ಇದು ನಮ್ಮ ಮೂಲಭೂತ ಹಕ್ಕು. ಮತಹಾಕಲು ಹಿಂದೂ, ಮುಸ್ಲಿಂ, ಸಿಖ್ ಅಥವಾ ಕ್ರಿಶ್ಚಿಯನ್ನರು ಎಂಬ ಯಾವ ಭೇದಭಾವವೂ ಇಲ್ಲ. ಸಬ್ ಕ ಸಾಥ್, ಸಬ್ ವಿಕಾಸ್ ಬಗ್ಗೆ ಬಿಜೆಪಿಗೆ ನಂಬಿಕೆಯಿದೆ. ಭಾರತದಲ್ಲಿರುವ ಮುಸ್ಲಿಮರು ಭಾರತವನ್ನು ತಾಯಿನಾಡು ಎಂದು ಪರಿಗಣಿಸಿದ್ದಾರೆ ಎಂದು ಹೇಳಿದ್ದಾರೆ.

ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಶಿವಸೇನೆ ಭಾರತವನ್ನು ಇಬ್ಬಾಗ ಮಾಡಲು ನೋಡುತ್ತಿದೆ. ಇಡೀ ವಿಶ್ವದಲ್ಲೇ ಅತೀ ಹೆಚ್ಚು ಮುಸ್ಲಿಂರನ್ನು ಹೊಂದಿರುವ ದೇಶಗಳಲ್ಲಿ ಭಾರತ ಎರಡನೇ ಸ್ಥಾನ ಪಡೆದಿದೆ. ಈ ಬಗ್ಗೆ ನಾವು ಹೆಮ್ಮೆ ಪಡಬೇಕು. ಶಿವಸೇನೆ ದೇಶವನ್ನು ಒಡೆಯುವ ಪ್ರಯತ್ನ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ಮಣಿ ಶಂಕರ್ ಐಯ್ಯರ್ ಆರೋಪ ವ್ಯಕ್ತಪಡಿಸಿದ್ದಾರೆ.

ಮುಸ್ಲಿಮರಿಗೆ ಆಗಿರುವ ಅನ್ಯಾಯದ ವಿರುದ್ಧ ಹೋರಾಟ ನಡೆಸುವ ನೆಪದಲ್ಲಿ ವೋಟ್ ಬ್ಯಾಂಕ್‌ ರಾಜಕಾರಣ ಮಾಡಲಾಗುತ್ತಿದೆ. ಮುಸ್ಲಿಮರ ಶೈಕ್ಷಣಿಕ ಹಾಗೂ ಆರೋಗ್ಯ ಸ್ಥಿತಿಗತಿಯನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದ್ದು, ಈ ಹಿಂದೆ ಕಾಂಗ್ರೆಸ್‌ ಇದನ್ನೇ ದಾಳವಾಗಿ ಬಳಸಿಕೊಂಡಿದೆ. ಈಗ ಜಾತ್ಯತೀತರೆಂದು ಹೇಳಿಕೊಳ್ಳುವ ಎಲ್ಲರೂ ಇದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ವೋಟ್ ಬ್ಯಾಂಕ್ ರಾಜಕಾರಣಕ್ಕೆ ಮುಸ್ಲಿಮರ ಮತ ಹೆಚ್ಚಾಗಿ ಬಳಕೆಯಾಗುತ್ತಿದ್ದು, ಮುಸ್ಲಿಮರ ಮತದಾನ ಹಕ್ಕನ್ನು ರದ್ದುಗೊಳಿಸಬೇಕೆಂದು ಶಿವಸೇನೆ ಮುಖಪುಟ ಸಾಮ್ನಾ ಪತ್ರಿಕೆಯ ಸಂಪಾದಕೀಯದಲ್ಲಿ ಶಿವಸೇನೆ ನಾಯಕ ಎಂಪಿ ಸಂಜಯ್ ರಾವತ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಎಂಪಿ ಸಂಜಯ್ ರಾವತ್ ಅವರ ಈ ಹೇಳಿಕೆಗೆ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಪ್ರತಿಪಕ್ಷಗಳು ಶಿವಸೇನೆ ವಿರುದ್ದ ಹರಿಹಾಯುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com