ತಾಳಿ ಕೀಳುವ ಚಳುವಳಿ: ಕೋರ್ಟ್ ಆದೇಶಕ್ಕೂ ಮುನ್ನವೇ ತಾಳಿತೆಗೆದ 21 ಮಹಿಳಾ ಮಣಿಗಳು

ವಿವಾದಾತ್ಮಕ ದ್ರಾವಿಡ ಕಳಗಂ (ಡಿಕೆ) ತಾಳಿ ಕೀಳುವ ಚಳುವಳಿಗೆ ಮದ್ರಾಸ್ ಹೈ ಕೋರ್ಟ್ ತಡೆಯಾಜ್ಞೆ ನೀಡುವುದಕ್ಕೂ ಮೊದಲೇ ಚಳುವಳಿಯಲ್ಲಿ ಭಾಗವಹಿಸಿದ್ದ 21 ಮಹಿಳೆಯರು ಸ್ವಯಂಪ್ರೇರಿತರಾಗಿ ತಾಳಿ ತೆಗೆದುಹಾಕಿರುವ...
ತಾಳಿ ಕೀಳುವ ಚಳುವಳಿ: ಕೋರ್ಟ್ ಆದೇಶಕ್ಕೂ ಮುನ್ನವೇ ತಾಳಿತೆಗೆದ 21ಮಹಿಳಾ ಮಣಿಗಳು
ತಾಳಿ ಕೀಳುವ ಚಳುವಳಿ: ಕೋರ್ಟ್ ಆದೇಶಕ್ಕೂ ಮುನ್ನವೇ ತಾಳಿತೆಗೆದ 21ಮಹಿಳಾ ಮಣಿಗಳು

ಚೆನ್ನೈ: ವಿವಾದಾತ್ಮಕ ದ್ರಾವಿಡ ಕಳಗಂ (ಡಿಕೆ) ತಾಳಿ ಕೀಳುವ ಚಳುವಳಿಗೆ ಮದ್ರಾಸ್ ಹೈ ಕೋರ್ಟ್ ತಡೆಯಾಜ್ಞೆ ನೀಡುವುದಕ್ಕೂ ಮೊದಲೇ ಚಳುವಳಿಯಲ್ಲಿ ಭಾಗವಹಿಸಿದ್ದ 21 ಮಹಿಳೆಯರು ಸ್ವಯಂಪ್ರೇರಿತರಾಗಿ ತಾಳಿ ತೆಗೆದುಹಾಕಿರುವ ಘಟನೆ ಮದ್ರಾಸ್ ನಲ್ಲಿ ನಡೆದಿದೆ.

ಮಹಾರಾಷ್ಟ್ರದಲ್ಲಿ ಗೋಹತ್ಯೆ, ಗೋಮಾಂಸ ನಿಷೇಧ ಹೇರಿಕೆ ಕುರಿತಂತೆ ವಿರೋಧ ವ್ಯಕ್ತಪಡಿಸಿದ್ದ ದ್ರಾವಿಡ ಕಳಗಂ ಸಂಘಟನೆಯು ಪ್ರತಿಭಟನೆ ನಡೆಸಲು ಯೋಜನೆ ರೂಪಿಸಿತ್ತು. ಇದೇ ವೇಳೆ ಖಾಸಗಿ ಸುದ್ದಿವಾಹಿನಿಯೊಂದು ಮಹಿಳಾ ದಿನಾಚರಣೆಯ ಅಂಗವಾಗಿ ಆಧುನಿಕ ಯುಗದಲ್ಲಿ ಮಂಗಳಸೂತ್ರ ವರವೇ ಅಥವಾ ಶಾಪವೇ ಎಂಬುದರ ಕುರಿತಂತೆ ಚರ್ಚಾ ಕಾರ್ಯಕ್ರಮವೊಂದನ್ನು ಏರ್ಪಡಿಸಿತ್ತು.

ಇದನ್ನೇ ಮುಂದಿಟ್ಟುಕೊಂಡ ದ್ರಾವಿಡ ಕಳಗಂ ಸಂಘಟನೆ ಮಹಾರಾಷ್ಟ್ರದಲ್ಲಿ ಗೋಹತ್ಯೆ ಹಾಗೂ ಗೋಮಾಂಸದ ಕುರಿತಂತೆ ತಮ್ಮ ವಿರೋಧ ವ್ಯಕ್ತಪಡಿಸಲು ಏಪ್ರಿಲ್ 14 ರಂದು ಗೋಮಾಂಸ ಭೋಜನ ಕೂಟ ಹಾಗೂ ತಾಳಿಕೀಳುವ ಪ್ರತಿಭಟನೆಯನ್ನು ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಸ್ಥಳೀಯ ಪೊಲೀಸರು ನಿಷೇಧ ಹೇರಿದ್ದರು.

ದ್ರಾವಿಡ ಕಳಗಂನ ಈ ಕ್ರಮಕ್ಕೆ ವಿಶ್ವ ಹಿಂದು ಪರಿಷತ್ ಹಾಗೂ ಸಂಘ ಪರಿವಾರ ಸೇರಿದಂತೆ ಹಲವು ಹಿಂದು ಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿತ್ತಲ್ಲದೆ, ಪ್ರತಿಭಟನೆಗೆ ಅವಕಾಶ ನೀಡಬಾರದು ಎಂದು ಚೆನ್ನೈ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು.

ಸಂಘಟನೆಯ ಈ ಮನವಿಯನ್ನು ಪರಿಗಣಿಸಿದ್ದ ಪೊಲೀಸ್ ಆಯುಕ್ತ ಧರ್ಮದ ಹೆಸರಿನಲ್ಲಿ ವೈರತ್ವಕ್ಕೆ ಪ್ರಚೋದನೆ ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಪರಿಚ್ಛೇದಗಳ ಅಡಿಯಲ್ಲಿ ಪ್ರತಿಭಟನೆಯ ಮುಖ್ಯಸ್ಥ ಕೆ.ವೀರಮಣಿ ವಿರುದ್ಧ ಪ್ರಕರಣ ದಾಖಲಿಸುವಂತೆಯೂ ಹಾಗೂ ಚಳುವಳಿಗೆ ನಿಷೇಧ ಹೇರುವಂತೆ ಸೂಚನೆ ನೀಡಿದ್ದರು.

ಪೊಲೀಸ್ ಆಯುಕ್ತರ ಈ ಕ್ರಮಕ್ಕೆ ತೀವ್ರರೀತಿಯಲ್ಲಿ ಕೆಂಡಾಮಂಡಲವಾದ ದ್ರಾವಿಡ ಕಳಗಂ ಸಂಘಟನೆ ಕಾರ್ಯಕರ್ತರು ಮದ್ರಾಸ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಗಣಿಸಿದ್ದ ಮದ್ರಾಸ್ ಹೈಕೋರ್ಟ್ ಏ.14 ರಂದು ವಿಚಾರಣೆ ನಡೆಸುವುದಾಗಿ ಹೇಳಿತ್ತು. ಅದರಂತೆ ಇಂದು ವಿಚಾರಣೆ ನಡೆಸಿದ ಹೈಕೋರ್ಟ್ ತಾಳಿ ಕೀಳುವ ದ್ರಾವಿಡ ಕಳಗಂನ ಚಳುವಳಿಗೆ ತಡೆಯಾಜ್ಞೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com