ರಫೆಲ್ ಒಪ್ಪಂದಕ್ಕೆ ಯುಪಿಎ ಡೀಲ್ ರದ್ದು

ಫ್ರಾನ್ಸ್ ಸರ್ಕಾರದಿಂದಲೇ ನೇರವಾಗಿ ರಫೆಲ್ ಯುದ್ಧ ವಿಮಾನ ಖರೀದಿ ಮಾಡಿರುವ ಕೇಂದ್ರ ಸರ್ಕಾರ ಹಿಂದಿನ ಯುಪಿಎ ಸರ್ಕಾರ 126 ಮೀಡಿಯಂ ಮಲ್ಟಿ ರೋಲ್ ಕಾಂಬಾಟ್ ಏರ್‍ಕ್ರಾಫ್ಟ್ ಖರೀದಿ ಒಪ್ಪಂದ ರದ್ದು ಮಾಡಲು 2007...
ರಕ್ಷಣಾ ಸಚಿವ ಮನೋಹರ್ ಪರಿಕ್ಕರ್
ರಕ್ಷಣಾ ಸಚಿವ ಮನೋಹರ್ ಪರಿಕ್ಕರ್

ನವದೆಹಲಿ: ಫ್ರಾನ್ಸ್ ಸರ್ಕಾರದಿಂದಲೇ ನೇರವಾಗಿ ರಫೆಲ್ ಯುದ್ಧ ವಿಮಾನ ಖರೀದಿ ಮಾಡಿರುವ ಕೇಂದ್ರ ಸರ್ಕಾರ ಹಿಂದಿನ ಯುಪಿಎ ಸರ್ಕಾರ 126 ಮೀಡಿಯಂ ಮಲ್ಟಿ ರೋಲ್ ಕಾಂಬಾಟ್ ಏರ್‍ಕ್ರಾಫ್ಟ್ ಖರೀದಿ ಒಪ್ಪಂದ ರದ್ದು ಮಾಡಲು 2007ರಲ್ಲಿ ಅಂದಿನ ಸರ್ಕಾರ ರು.12,485 ಕೋಟಿ ವೆಚ್ಚದಲ್ಲಿ ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು.

ಫ್ರಾನ್ಸ್ ನಿರ್ಮಿತ ಯುದ್ಧ ವಿಮಾನ ಐಎಎಫ್ ನಲ್ಲಿರುವ ಮಿಗ್ 21ಕ್ಕೆ ಬದಲಿಯಾಗುವುದಿಲ್ಲ. ಆದರೆ ಮುಂದಿನ 6-10 ವರ್ಷಗಳಲ್ಲಿ ಈ ಎಲ್ಲವುಗಳನ್ನು ಹಂತ ಹಂತವಾಗಿ ನೇಪಥ್ಯಕ್ಕೆ ಸರಿಸಲಾಗುತ್ತದೆ ಎಂದು ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ತಿಳಿಸಿದ್ದಾರೆ.

ಮಿಗ್ 21ರ ಸ್ಥಾನದಲ್ಲಿ ದೇಶಿಯವಾಗಿ ನಿರ್ಮಿಸಲಾಗಿರುವ ಹಗುರ ಯುದ್ಧ ವಿಮಾನ (ಎಲ್‍ಸಿಎ) ತೇಜಸ್ ಅನ್ನು ಮುಂಚೂಣಿಗೆ ತರಲಾಗುತ್ತದೆ ಎಂದಿದ್ದಾರೆ ಪರ್ರಿಕರ್. ಇಷ್ಟು ಮಾತ್ರವಲ್ಲದೆ, ಮುಂದಿನ ದಿನಗಳಲ್ಲಿ ವಿಮಾನ ಖರೀದಿ ಬಗ್ಗೆ ಫ್ರಾನ್ಸ್ ಸರ್ಕಾರದ ಜತೆ ನಮ್ಮ ಸರ್ಕಾರವೇ ನೇರವಾಗಿ ವ್ಯವಹರಿಸಲಿದೆ ಎಂದಿದ್ದಾರೆ. ಹಿಂದಿನ ಸರ್ಕಾರದ ಒಪ್ಪದ ರದ್ದು ಮಾಡುವ ಬಗ್ಗೆ ಸ್ಪಷ್ಟವಾಗಿ ಹೇಳದಿದ್ದರೂ, ಒಂದೇ ಕಾರು 2 ರಸ್ತೆಗಳಲ್ಲಿ ಏಕಕಾಲಕ್ಕೆ ಓಡಲಾರದು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com