ಹುತಾತ್ಮ ಪೊಲೀಸ್‌ ಅಧಿಕಾರಿಯ ಅಂತ್ಯಸಂಸ್ಕಾರಕ್ಕೆ ನೀಡಿದ್ದ 10 ಸಾವಿರ ವಾಪಸ್‌ ಕೇಳಿದ ಸರ್ಕಾರ!

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಯ್‌ಪುರ: ಛತ್ತೀಸ್ ಗಢ ಸರ್ಕಾರ ನಕ್ಸಲ್‌ ದಾಳಿಯಲ್ಲಿ ಹುತಾತ್ಮರಾದ ಪೊಲೀಸ್‌ ಅಧಿಕಾರಿಯ ಅಂತ್ಯಸಂಸ್ಕಾರಕ್ಕೆ ನೀಡಿದ್ದ 10 ಸಾವಿರ ರುಪಾಯಿಯನ್ನು ವಾಪಸ್‌ ನೀಡುವಂತೆ ಛತ್ತೀಸ್ ಗಢ ಪೊಲೀಸ್ ಇಲಾಖೆ ಆದೇಶಿಸಿದ ಅಘಾತಕಾರಿ ಘಟನೆ ಬುಧವಾರ ನಡೆದಿದೆ.

ವಿಷಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ವಿಪಕ್ಷಗಳಿಂದ ಹಾಗೂ  ಜನತೆಯಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಹುತಾತ್ಮ ಪೊಲೀಸ್‌ ಅಧಿಕಾರಿಯ ಕುಟುಂಬಕ್ಕೆ ನೀಡಿದ್ದ ನೊಟೀಸ್‌ ಅನ್ನು ಹಿಂಪಡೆದಿದ್ದಾರೆ.

ಮೇ 23, 2011ರಂದು ನಕ್ಸಲ್‌ ದಾಳಿಯಲ್ಲಿ ಮೃತಪಟ್ಟಿದ್ದ ವಿಶೇಷ ಪೊಲೀಸ್‌ ಅಧಿಕಾರಿ ಕಿಶೋರ್‌ ಪಾಂಡೆಯ ಅಂತಿಮ ಸಂಸ್ಕಾರ ನಡೆಸಲು ಛತ್ತೀಸ್ ಗಢ ಸರ್ಕಾರ ನೀಡಿದ್ದ 10 ಸಾವಿರ ರುಪಾಯಿಯನ್ನು ವಾಪಸ್‌ ನೀಡುವಂತೆ ಪೊಲೀಸರು ಅಧಿಕಾರಿಯ ಕುಟುಂಬಕ್ಕೆ ಎರಡು ಬಾರಿ ನೋಟಿಸ್‌ ನೀಡಿದ್ದರು.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸೇನಾ ಮುಖ್ಯಸ್ಥ ಹಾಗೂ ವಿದೇಶಾಂಗ ಖಾತೆಯ ರಾಜ್ಯ ಸಚಿವ ಜನರಲ್ ವಿ.ಕೆ.ಸಿಂಗ್‌ ಅವರು, ಇದು ಕ್ಲರಿಕಲ್‌ ಮಿಸ್ಟೇಕ್‌ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com