ಜೈಲು ಅಧಿಕಾರಿಗಳಿಂದ ಚಿತ್ರಹಿಂಸೆ

ಕೇಂದ್ರ ಕಾರಾಗೃಹದಲ್ಲಿ ಕೈದಿಗಳನ್ನು ಹೀನಾಯವಾಗಿ ನಡೆಸಿಕೊಂಡಿರುವ ದೃಶ್ಯಾವಳಿಗಳನ್ನು ವಾರ್ಡನ್ ಸೆರೆ ಹಿಡಿದಿದ್ದಾರೆ...
ಕೇಂದ್ರ ಕಾರಾಗೃಹ
ಕೇಂದ್ರ ಕಾರಾಗೃಹ

ಕೊಯಂಬತ್ತೂರು: ಕೇಂದ್ರ ಕಾರಾಗೃಹದಲ್ಲಿ ಕೈದಿಗಳನ್ನು ಹೀನಾಯವಾಗಿ ನಡೆಸಿಕೊಂಡಿರುವ ದೃಶ್ಯಾವಳಿಗಳನ್ನು ವಾರ್ಡನ್ ಸೆರೆ ಹಿಡಿದಿದ್ದಾರೆ.

ಈ ವಿಡಿಯೋದಲ್ಲಿ ಮೂವರು ಕೈದಿಗಳನ್ನು ಬೆತ್ತಲೆ ಮಾಡಿ ಚಿತ್ರಹಿಂಸೆ ನೀಡಿರುವುದು ದಾಖಲಾಗಿದೆ.

ಅಲ್ಲದೇ ನೆಲದ ಮೇಲೆಯೇ ಊಟ ಮಾಡುತ್ತಿರುವುದು, ನಿದ್ದೆ ಮಾಡದಂತೆ ನೀರು ಚಿಮುಕಿಸುತ್ತಿರುವುದು ಕೂಡ ದಾಖಲಾಗಿದೆ. ಜೈಲು ಅಧಿಕಾರಿಗಳು ನೀಡಿರುವ ಈ ಚಿತ್ರಹಿಂಸೆಯನ್ನು ವಾರ್ಡನ್‍ವೊಬ್ಬರು ವಿಡಿಯೋ ಮಾಡಿದ್ದರಿಂದ ಈ ಪ್ರಕರಣ ಬೆಳಕಿಗೆ ಬಂದಿದೆ.

ಪ್ರಕರಣದ ಬಗ್ಗೆ ತನಿಖೆ ನಡೆಸಲು ಜೈಲು ಅಧಿಕಾರಿಗಳು ತಂಡವೊಂದನ್ನು ರಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com