ಗ್ರಾಮೀಣಾಭಿವೃದ್ಧಿ: ಕರ್ನಾಟಕಕ್ಕೆ ಪ್ರಶಸ್ತಿ
ದೇಶ
ಗ್ರಾಮೀಣಾಭಿವೃದ್ಧಿ: ಕರ್ನಾಟಕಕ್ಕೆ ಪ್ರಶಸ್ತಿ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ತೋರುವ ರಾಜ್ಯಗಳಿಗೆ ನೀಡುವ ಪ್ರಶಸ್ತಿಗೆ ಕರ್ನಾಟಕ ಭಾಜನವಾಗಿದೆ...
ನವದೆಹಲಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ತೋರುವ ರಾಜ್ಯಗಳಿಗೆ ನೀಡುವ ಪ್ರಶಸ್ತಿಗೆ ಕರ್ನಾಟಕ ಭಾಜನವಾಗಿದೆ.
ಏ.24ರಂದು ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಪಂಚಾಯತ್ ದಿನದ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರಧಾನಿ ಮೋದಿ ಪ್ರದಾನ ಮಾಡಲಿದ್ದಾರೆ.
ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು ಸಮರ್ಥವಾಗಿ ಅನುಷ್ಠಾನಕ್ಕೆ ತರುವ ರಾಜ್ಯಗಳನ್ನು, ಪಂಚಾಯತ್ ರಾಜ್ ಯೋಜನೆಗಳಲ್ಲಿ ಉತ್ತಮ ಚಟುವಟಿಕೆ ತೋರುವ ರಾಜ್ಯಗಳನ್ನು ಗುರುತಿಸಿ ಈ ಪ್ರಮಾಣ ಪ್ರಶಸ್ತಿ ನೀಡಲಾಗುತ್ತಿದ್ದು, ರಾಜ್ಯ ಸರ್ವ ಶಿಕ್ಷಣ ಅಭಿಯಾನ, ಗ್ರಾಮೀಣ ಆರೋಗ್ಯ ಯೋಜನೆ, ಸಾಕ್ಷರ ಭಾರತ ಅಭಿಯಾನ, ಕೃಷಿ ವಿಕಾಸ ಯೋಜನೆ ಎಲ್ಲದರಲ್ಲೂ ಅತ್ಯುತ್ತಮ ಸಾಧನೆ ತೋರಿರುವುದನ್ನು ಕೇಂದ್ರ ಗುರುತಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ