ವಿವಾದಾತ್ಮಕ ಐಟಿ ರಿಟರ್ನ್ಸ್ ಫಾರಂ ವಾಪಸ್‍ಗೆ ನಿರ್ಧಾರ

ವಿದೇಶಿ ಪ್ರಯಾಣ ವಿವರ, ಬ್ಯಾಂಕ್ ಖಾತೆಗಳ ವಿವರ ಬಹಿರಂಗಪಡಿಸುವುದನ್ನು ಕಡ್ಡಾಯ ಮಾಡುವ ಹೊಸ ವಿವಾದಾತ್ಮಕ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಫಾರಂಗಳನ್ನು ಸರ್ಕಾರ ಹಿಂಪಡೆಯಲಿದೆ. ಜತೆಗೆ, ಸರಳ ಫಾರಂಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ ಎಂದು ಘೋಷಿಸಿದೆ...
ವಿತ್ತ ಸಚಿವ ಅರುಣ್ ಜೇಟ್ಲಿ
ವಿತ್ತ ಸಚಿವ ಅರುಣ್ ಜೇಟ್ಲಿ

ನವದೆಹಲಿ: ವಿದೇಶಿ ಪ್ರಯಾಣ ವಿವರ, ಬ್ಯಾಂಕ್ ಖಾತೆಗಳ ವಿವರ ಬಹಿರಂಗಪಡಿಸುವುದನ್ನು ಕಡ್ಡಾಯ ಮಾಡುವ ಹೊಸ ವಿವಾದಾತ್ಮಕ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಫಾರಂಗಳನ್ನು ಸರ್ಕಾರ ಹಿಂಪಡೆಯಲಿದೆ. ಜತೆಗೆ, ಸರಳ ಫಾರಂಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ ಎಂದು ಘೋಷಿಸಿದೆ.

ತೆರಿಗೆ ತಜ್ಞರು ಹಾಗೂ ತೆರಿಗೆದಾರರಿಂದ ವ್ಯಕ್ತವಾದ ತೀವ್ರ ವಿರೋಧದಿಂದಾಗಿ ಹಣಕಾಸು ಸಚಿವರು ಶನಿವಾರ ವಾಷಿಂಗ್ಟನ್ ನಿಂದಲೇ ಫಾರಂ ಕುರಿತು ವಿವರಣೆ ಕೇಳಿದ್ದಾರೆ.
ಜತೆಗೆ, ಈ ಹೊಸ ಫಾರಂ ಕುರಿತು ಮರುಪರಿಶೀಲನೆ ನಡೆಸುವಂತೆ ಸೂಚಿಸಿದ್ದಾರೆ. ಸರ್ಕಾರ ಸದ್ಯದಲ್ಲೇ ಸರಳ ಐಟಿಆರ್ ಫಾರಂ ಅನ್ನು ಬಿಡುಗಡೆ ಮಾಡಲಿದೆ ಎಂದು ಕಂದಾಯ ಕಾರ್ಯದರ್ಶಿ ಶಕ್ತಿಕಾಂತ ದಾಸ್ ಮಾಹಿತಿ ನೀಡಿದ್ದಾರೆ. ಈ ರೀತಿಯ ಫಾರಂ ಮೂಲಕ ಸರ್ಕಾರ ಅಗತ್ಯಕ್ಕಿಂತ ಜಾಸ್ತಿ ಮಾಹಿತಿ ಕೇಳುತ್ತಿದೆ, ಜತೆಗೆ ತೆರಿಗೆದಾರರಲ್ಲಿ ವಿನಾ ಕಾರಣ
ಗೊಂದಲ ಮೂಡಿಸುತ್ತದೆ ಎಂದು ತೆರಿಗೆ ತಜ್ಞರು ಟೀಕೆ ಮಾಡಿದ್ದರು.

ಸರ್ಕಾರದ ಈ ಕ್ರಮ ಐಟಿ ಅಧಿಕಾರಿಗಳಿಗೆ ಕಿರುಕುಳ ನೀಡಲು ಹೊಸ ಅಸ್ತ್ರ ನೀಡಿದಂತಾಗುತ್ತದೆ ಎಂದು ತೆರಿಗೆದಾರರು ಆತಂಕ ವ್ಯಕ್ತಪಡಿಸಿದ್ದರು. ಸರ್ಕಾರ ಈ ಹೊಸ ಫಾರಂಗಳನ್ನು ಶುಕ್ರವಾರವಷ್ಟೇ ಬಿಡುಗಡೆ ಮಾಡಿತ್ತು. ಆ ಫಾರಂನಲ್ಲಿ ಬ್ಯಾಂಕ್ ಖಾತೆಗಳು, ಪಾಸ್‍ಪೋರ್ಟ್ ಮತ್ತು ಆಧಾರ್ ಕಾರ್ಡ್ ನಂಬರ್‍ಗಳ ವಿವರ ನೀಡುವುದು ಕಡ್ಡಾಯವಾಗಿತ್ತು. ಈ 14 ಪುಟಗಳ ಹೊಸ ಫಾರಂ ಅನ್ನು ಈ ಹಣಕಾಸು ವರ್ಷದಿಂದಲೇ ಚಾಲ್ತಿಗೆ ಬರುವಂತೆ ಕಡ್ಡಾಯ ಮಾಡಲಾಗಿತ್ತು. ವಿದೇಶಿ ಪ್ರಯಾಣದ ವಿವರ ಮಾತ್ರವಲ್ಲದೆ, ಬಳಸಿದ ಹಣದ ಮೂಲವನ್ನೂ ಪ್ರಕಟಿಸುವುದು ಕಡ್ಡಾಯವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com