ಅಜ್ಮೀರ್ ದರ್ಗಾಗೆ ಚಾದರ್ ಕೊಡುಗೆ

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಅಜ್ಮೇರ್ ನ ಹಜ್ರತ್ ಖ್ವಾಜಾ ಮೊಯಿನುದ್ದೀನ್ ಹಸನ್ ಚಿಸ್ತಿ ದರ್ಗಾಗೆ `ಚಾದರ್' ಅರ್ಪಿಸಿದ್ದಾರೆ...
ಅಜ್ಮೀರ್ ದರ್ಗಾಗೆ ಚಾದರ್ ಕೊಡುಗೆ
ಅಜ್ಮೀರ್ ದರ್ಗಾಗೆ ಚಾದರ್ ಕೊಡುಗೆ
Updated on

ಮುಂಬೈ: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಅಜ್ಮೇರ್ ನ ಹಜ್ರತ್ ಖ್ವಾಜಾ ಮೊಯಿನುದ್ದೀನ್ ಹಸನ್ ಚಿಸ್ತಿ ದರ್ಗಾಗೆ `ಚಾದರ್' ಅರ್ಪಿಸಿದ್ದಾರೆ.

ಈ ದರ್ಗಾದಲ್ಲಿ ಸೋಮವಾರದಿಂದ 1 ವಾರ ಕಾಲ 803ನೇ ಉರುಸ್ ಆಚರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಗರೀಬ್ ನವಾಜ್ ಸಮಾಧಿಗೆ ಕೆಂಪು ಬಣ್ಣದ ಚಾದರ್ ಅನ್ನು ಕಳುಹಿಸಿದ್ದಾರೆ. ಈ ಚಾದರ್ ಅನ್ನು ಉದ್ಘಾಟನಾ ಸಮಾರಂಭದಂದು ಒಬಾಮ ಪರವಾಗಿ ಸಮಾಧಿಗೆ ಹೊದಿಸಲಾಗುವುದು ಎಂದು ಅಜ್ಮೀರ್ ಚಿಸ್ತಿ ಫೌಂಡೇಶನ್‍ನ ನಿರ್ದೇಶಕ ಹಾಜಿ ಸೈಯೀದ್ ಸಲ್ಮಾನ್ ಚಿಸ್ತಿ ತಿಳಿಸಿದ್ದಾರೆ.

ಒಬಾಮ ಅವರು ಅಮೆರಿಕ ರಾಯಭಾರಿ ರಿಚರ್ಡ್ ವರ್ಮಾ ಅವರ ಮೂಲಕ ಈ ಚಾದರ್ ಅನ್ನು ಕಳುಹಿಸಿಕೊಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com