ಆನ್ ಲೈನ್ ನಲ್ಲಿ "ಆಲ್ ಇಂಡಿಯಾ ರೆಡಿಯೋ'

ಆಲ್ ಇಂಡಿಯಾ ರೇಡಿಯೋ ಅಂತರ್ಜಾಲ ಕ್ಷೇತ್ರಕ್ಕೆ ಕಾಲಿರಿಸಿದೆ, ಈಗ 4 ಪ್ರಾದೇಶಿಕ ಚಾನಲ್‌ಗಳನ್ನು ವೆಬ್‌ಸೈಟ್ ಮೂಲಕ ಪ್ರಸಾರ ಮಾಡುವ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಆಲ್ ಇಂಡಿಯಾ ರೇಡಿಯೋ ಅಂತರ್ಜಾಲ ಕ್ಷೇತ್ರಕ್ಕೆ ಕಾಲಿರಿಸಿದೆ, ಈಗ 4 ಪ್ರಾದೇಶಿಕ ಚಾನಲ್‌ಗಳನ್ನು ವೆಬ್‌ಸೈಟ್ ಮೂಲಕ ಪ್ರಸಾರ ಮಾಡುವ ಹೊಸ ಪ್ರಯತ್ನಕ್ಕೆ ಆಲ್ ಇಂಡಿಯಾ ರೇಡಿಯೋ ಮುಂದಾಗಿದೆ.

ಈಗಾಗಲೇ ಆಲ್ ಇಂಡಿಯಾ ರೇಡಿಯೋದ ವೆಬ್‌ಸೈಟ್‌ನಲ್ಲಿ ‌ದೆಹಲಿಯ ಎಫ್ ಎಂ ಗೋಲ್ಡ್, ಎಫ್ ಎಂ ರೈಂಬೋ ಮತ್ತು ಎಫ್ ಎಂ ಉರ್ದು ಚಾನಲ್‌ಗಳು ಹಾಗೂ ಮುಂಬೈನ ವಿವಿಧ ಭಾರತಿ ಚಾನೆಲ್‌ನಲ್ಲಿ ಲಭ್ಯವಿದೆ. ಕೇಳುಗರು ವೆಬ್‌ಸೈಟ್‌ನಲ್ಲಿ ಚಾನಲ್ ಕೇಳಬಹುದಾಗಿದೆ.

ಆಲ್ ಇಂಡಿಯಾ ರೇಡಿಯೋ ಮತ್ತಷ್ಟು ಚಾನಲ್‌ಗಳನ್ನು ಸೇರ್ಪಡೆ ಮಾಡಲು ನಿರ್ಧರಿಸಿದ್ದು, ಪ್ರಾರಂಭಿಕ ಹಂತದಲ್ಲಿ ಗುಜರಾತಿ, ಮರಾಠಿ, ಪಂಜಾಬಿ ಮತ್ತು ಮಲಯಾಳಿ ಪ್ರಾದೇಶಿಕ ಚಾನಲ್‌ಗಳನ್ನು ಅಂತರ್ಜಲಕ್ಕೆ ಸೇರ್ಪಡೆ ಮಾಡಿದೆ. ಕೇಳುಗರು www.allindiaradio.gov.inನಲ್ಲಿ ರೇಡಿಯೋ ಕೇಳಬಹುದು.

ಮುಂದಿನ ದಿನಗಳಲ್ಲಿ ಎಲ್ಲಾ ಪ್ರಾದೇಶಿಕ ಚಾನಲ್‌‌ಗಳನ್ನೂ ಅಂತರ್ಜಾಲಕ್ಕೆ ಸೇರ್ಪಡೆ ಮಾಡುತ್ತಿದೆ. ಇದರಿಂದ ಪ್ರಪಂಚದ ಯಾವುದೇ ಮೂಲೆಯಲ್ಲಿ ಪ್ರಾದೇಶಿಕ ಚಾನಲ್‌ಗಳನ್ನು ಕೇಳಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com