ಡಿಡಿ ಚಾನೆಲ್‍ಗಳಿಗೆ ಸ್ಮಾರ್ಟ್ ಟಚ್!

ದೂರದರ್ಶನದ ಚಾನೆಲ್ ಗಳಿಗೂ ಇನ್ನು `ಸ್ಮಾರ್ಟ್' ಟಚ್! ಇನ್ನು ಮುಂದೆ ಸ್ಮಾರ್ಟ್ ಫೋನ್‍ಗಳಲ್ಲೂದೂರದರ್ಶನದ ಚಾನೆಲ್‍ಗಳನ್ನು...
ಸ್ಮಾರ್ಟ್ ಫೋನ್‍ ವೀಕ್ಷಣೆ
ಸ್ಮಾರ್ಟ್ ಫೋನ್‍ ವೀಕ್ಷಣೆ

ನವದೆಹಲಿ: ದೂರದರ್ಶನದ ಚಾನೆಲ್ ಗಳಿಗೂ ಇನ್ನು `ಸ್ಮಾರ್ಟ್' ಟಚ್! ಇನ್ನು ಮುಂದೆ ಸ್ಮಾರ್ಟ್ ಫೋನ್‍ಗಳಲ್ಲೂದೂರದರ್ಶನದ ಚಾನೆಲ್‍ಗಳನ್ನು ವೀಕ್ಷಿಸಬಹುದು. ಅದೂ ಇಂಟರ್ನೆಟ್ ಅಥವಾ ದೂರಸಂಪರ್ಕ ಬ್ರಾಡ್‍ಬ್ಯಾಂಡ್ ಇಲ್ಲದೇ. ಹೌದು. ಇಂತಹುದೊಂದು ಪ್ರಸ್ತಾಪವನ್ನು ಪ್ರಸಾರ ಭಾರತಿಯು ಕೇಂದ್ರ ಮಾಹಿತಿ ಮತ್ತು ವಾರ್ತಾ ಸಚಿವಾಲಯದ ಮುಂದಿಟ್ಟಿದೆ. ಭಾರಿ ಸಂಖ್ಯೆಯ ವೀಕ್ಷಕರನ್ನು ಸೆಳೆಯುವ ಉದ್ದೇಶದಿಂದ ಪ್ರಸಾರ ಭಾರತಿಯು ಇಂತಹ ಯೋಜನೆಗೆ ಮುಂದಾಗಿದೆ.

ನೀಲನಕ್ಷೆ ಸಿದ್ಧ
: ಆರಂಭದಲ್ಲಿ ದೂರದರ್ಶನ ಪ್ರಮುಖ ಚಾನೆಲ್ ಸೇರಿದಂತೆ ಸುಮಾರು 20 ಚಾನೆಲ್‍ಗಳ ಗುಚ್ಛವನ್ನು ತಯಾರಿಸಿ ಸ್ಮಾರ್ಟ್ ಫೋನ್‍ಗಳಲ್ಲಿ ಸಿಗುವಂತೆ ಮಾಡುವುದು. ಈ ಮೂಲಕ ಸ್ಮಾರ್ಟ್  ಫೋನ್,  ಟ್ಯಾಬ್ಲೆಟ್‍ಗಳಲ್ಲೇ ಹೆಚ್ಚಿನ ಸಮಯ ವನ್ನು ಕಳೆಯುವ ಯುವಜನಾಂಗವನ್ನು ಆಕರ್ಷಿಸು
ವುದು ಪ್ರಸಾರ ಭಾರತಿಯ ಯೋಜನೆಯಾ ಗಿದೆ. ಪ್ರಸ್ತುತ ಇರುವ ಮೂಲಸೌಕರ್ಯ ಗಳನ್ನು ಮೇಲ್ದರ್ಜೆಗೇರಿ ಸಿದರೆ ಈ ಗುರಿ ತಲುಪುವುದು ಕಷ್ಟವೇನೂ ಅಲ್ಲ ಎನ್ನುತ್ತಾರೆ
ಪ್ರಸಾರ ಭಾರತಿ ಸಿಇಒ ಜವಾಹರ್ ಸರ್ಕಾರ್.ಬಾಹ್ಯ ಡಾಂಗಲ್ ಅಥವಾ ಇನ್‍ಬಿಲ್ಟ್ ಚಿಪ್ ಮೂಲಕ ಡಿಜಿಟಲ್ ಸಿಗ್ನಲ್‍ಗಳನ್ನು ನೇರವಾಗಿ ಕಳುಹಿಸಲು ನೆರವಾಗುವ ಸಾಕಷ್ಟು ಟ್ರಾನ್ಸ್ಮಿಟರ್‍ಗಳು ಪ್ರಸಾರ ಭಾರತಿಯಲ್ಲಿವೆ. ಒಟ್ಟಾರೆ ಯೋ ಜನೆಯ ಬಗೆಗಿನ ನೀಲನಕ್ಷೆಯನ್ನು ಸಚಿವಾಲಯಕ್ಕೆ ಕಳುಹಿಸಿ ಕೊಡಲಾಗಿದೆ. ಜತೆಗೆ, ದೆಹಲಿಯಲ್ಲಿ ಸಂಸ್ಥೆಯೊಳಗೇ ಇದರ ಪ್ರಾಯೋ ಗಿಕ ಪರೀಕ್ಷೆಯನ್ನೂ ನಡೆಸಲಾ ಗುತ್ತಿದೆ ಎಂದಿದ್ದಾರೆ ಸಿರ್ಕಾರ್. ಯೋಜನೆಗೆ ಹಸಿರು ನಿಶಾನೆ ದೊರೆತರೆ, 20 ಟಿವಿ ಚಾನೆಲ್‍ಗಳು ಹಾಗೂ 20 ರೇಡಿಯೋ  ಚಾನೆಲ್‍ಗಳನ್ನು ಸ್ಮಾಟ್ರ್ ಫೋನ್‍ಗಳಲ್ಲಿ ವೀಕ್ಷಿಸಲು ಸಾಧ್ಯವಾಗಲಿದೆ.


ಇಡೀ ಪ್ರಪಂಚವೇ ಭೂಪ್ರದೇಶದಿಂದ ಉಪಗ್ರಹಗಳತ್ತ ಚಲಿಸುತ್ತಿದೆ, ಆದರೆ ದೂರದರ್ಶನ ಮಾತ್ರ ಹಿಂದಕ್ಕೆ ಸಾಗುತ್ತಿದೆ. ಹಾಗಾಗಿ ನಾವು ಹೊಸ ತಂತ್ರಜ್ಞಾನಗ ಳೊಂದಿಗೆ ಪ್ರಸ್ತುತ ಇರುವ ಮೂಲಸೌಕರ್ಯಗಳನ್ನು ಬಳಸಿ ಮುಂದಕ್ಕೆ ಸಾಗಲೇಬೇಕು.
- ಜವಾಹರ್ ಸರ್ಕಾರ್,
ಪ್ರಸಾರ ಭಾರತಿ ಸಿಇಒ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com