ಇಸ್ಲಾಮಾಬಾದ್: ಮುಂಬೈ ದಾಳಿ ಪ್ರಕರಣದಲ್ಲಿ ಬಿಡುಗಡೆಯಾಗಿರುವ ಲಷ್ಕರ್ ಉಗ್ರ ಝಕಿವುರ್ ರೆಹಮಾನ್ ಲಖ್ವಿ ಮತ್ತೊಂದು ಪ್ರಕರಣದಲ್ಲೂ ದೋಷಮುಕ್ತಿಗೊಂಡಿದ್ದಾನೆ.
2009ರಲ್ಲಿ ಆಫ್ಘನ್ ಪ್ರಜೆಯನ್ನು ಅಪಹರಣ ಮಾಡಿದ ಪ್ರಕರಣದಲ್ಲಿ ಉಗ್ರನ ವಿರುದ್ಧ ಮೊಕದ್ದಮೆ ಹೂಡಲಾಗಿತ್ತು. ಇಸ್ಲಾಮಾಬಾದ್‍ನ ಕೋರ್ಟ್ ಲಖ್ವಿ ಪರ ವಕೀಲರು ಸಲ್ಲಿಸಿದ ಮನವಿ
ಪುರಸ್ಕರಿಸಿ ಆತನನ್ನು ಆರೋಪ ಮುಕ್ತಗೊಳಿಸಿದೆ. ಪ್ರತಿವಾದಿ ವಕೀಲರು ಸೂಕ್ತ ಸಾಕ್ಷ್ಯಾಧಾರ ಒದಗಿಸಲು ವಿಫಲರಾಗಿದ್ದರಿಂದ ಕೋರ್ಟ್ ಈ ನಿರ್ಣಯ ಕೈಗೊಂಡಿದೆ. ಕೋರ್ಟ್‍ನ ಈ ಕ್ರಮದಿಂದ ಗಡಿ ನಿಯಂತ್ರಣ ರೇಖೆಯಲ್ಲಿ ಉಗ್ರ ಚಟುವಟಿಕೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.
Advertisement