ವಾದ್ರಾಗೆ ಬಂದಿದೆ ಕೋಪ!

ವಿಮಾನ ನಿಲ್ದಾಣಗಳಲ್ಲಿ ಅತಿ ಗಣ್ಯ ವ್ಯಕ್ತಿಗಳಿಗೆ (ವಿವಿಐಪಿ) ಸೌಲಭ್ಯ ಏಕೆ ಇನ್ನೂ ಇದೆ? ಮೊದಲು ಅದನ್ನು ತೆಗೆದು ಹಾಕಿ' ಹೀಗೆಂದು ಒತ್ತಾಯ ಮಾಡಿದ್ದು ಸೋನಿಯಾ...
ರಾಬರ್ಟ್ ವಾದ್ರಾ
ರಾಬರ್ಟ್ ವಾದ್ರಾ

ನವದೆಹಲಿ: `ವಿಮಾನ ನಿಲ್ದಾಣಗಳಲ್ಲಿ ಅತಿ ಗಣ್ಯ ವ್ಯಕ್ತಿಗಳಿಗೆ (ವಿವಿಐಪಿ) ಸೌಲಭ್ಯ ಏಕೆ ಇನ್ನೂ ಇದೆ? ಮೊದಲು ಅದನ್ನು ತೆಗೆದು ಹಾಕಿ' ಹೀಗೆಂದು ಒತ್ತಾಯ ಮಾಡಿದ್ದು ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ. ಎಲ್ಲದಕ್ಕಿಂತ ಹೆಚ್ಚಾಗಿ ನಾಗರಿಕ ವಿಮಾನ ಸಚಿವ ಅಶೋಕ ಪಶುಪತಿ ಗಜಪತಿ ರಾಜು ಭದ್ರತಾ ತಪಾಸಣೆಗೆ ಒಳಗಾಗದೆ ಇರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿವಿಐಪಿ ಸೌಲಭ್ಯ ಮುಂದುವರಿಸಿರುವುದು ಕೇಂದ್ರದ ಬೂಟಾಟಿಕೆ ನೀತಿ ತೋರಿಸುತ್ತದೆ ಎಂದು ಅವರು ಫೇ ಸ್‍ಬುಕ್‍ನಲ್ಲಿ ಬರೆದು ಕೊಂಡಿದ್ದಾರೆ. ಅತಿ ಗಣ್ಯರ ಪಟ್ಟಿಯಿಂದ ತಮ್ಮನ್ನು ಕೈಬಿಟ್ಟಿರುವುದಕ್ಕೆ ಸಂತೋಷವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com