ಡಾ.ವಿವೇಕ್ ಮೂರ್ತಿ
ಡಾ.ವಿವೇಕ್ ಮೂರ್ತಿ

ಅಮೆರಿಕದ ಪ್ರಧಾನ ಸರ್ಜನ್‌ ಆಗಿ ಅಧಿಕಾರ ಸ್ವೀಕರಿಸಿದ ಕನ್ನಡಿಗ

ಅಮೆರಿಕದ ಇತಿಹಾಸದಲ್ಲಿಯೇ ಪ್ರಧಾನ ಸರ್ಜನ್‌ ಸ್ಥಾನವನ್ನು ಅಲಂಕರಿಸಿದ ಅತಿ ಚಿಕ್ಕ ವಯಸ್ಸಿನವರು ಎಂಬ ಹೆಗ್ಗಳಿಕೆ ಕರ್ನಾಟಕದ ಮಂಡ್ಯ ಮೂಲದ...

ವರ್ಜಿನಿಯಾ: ಅಮೆರಿಕದ ಇತಿಹಾಸದಲ್ಲಿಯೇ ಪ್ರಧಾನ ಸರ್ಜನ್‌ ಸ್ಥಾನವನ್ನು ಅಲಂಕರಿಸಿದ ಅತಿ ಚಿಕ್ಕ ವಯಸ್ಸಿನವರು ಎಂಬ ಹೆಗ್ಗಳಿಕೆ ಕರ್ನಾಟಕದ ಮಂಡ್ಯ ಮೂಲದ ಡಾ. ವಿವೇಕ್‌ ಹಲ್ಲೇಗೆರೆ ಮೂರ್ತಿ ಪಾತ್ರರಾಗಿದ್ದಾರೆ.

ಅಮೆರಿಕದ ಆರೋಗ್ಯ ಸೇವೆಯ ಉನ್ನತ ಹುದ್ದೆಯಾದ ಸರ್ಜನ್‌ ಜನರಲ್‌ ಆಗಿ ಮಂಡ್ಯ ಜಿಲ್ಲೆಯ ಹಲ್ಲೆಗೆರೆ ಮೂಲದ ಅಮೆರಿಕದ ವೈದ್ಯ ಡಾ.ವಿವೇಕ್‌ ಮೂರ್ತಿ (37) ಅವರು ಗುರುವಾರ ಇಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ.

ಅಮೆರಿಕದ ಉಪಾಧ್ಯಕ್ಷ  ಜೋಸ್‌ ಬಿಡೆನ್‌ ಅವರು ಮೂರ್ತಿಗೆ ಅವರಿಗೆ ಪ್ರಮಾಣ ವಚನ ಬೋಧಿಸಿದ್ದು, ಭಗದ್ಗೀತೆ ಹೆಸರಿನಲ್ಲಿ ಮೂರ್ತಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಧಿಕಾರ ಸ್ವೀಕರಿಸಿದ ನಂತರ ಒಟ್ಟು ನಾಲ್ಕು ವರ್ಷಗಳವರೆಗೆ ಅವರು ಈ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಾರೆ.

‘ಸರ್ಜನ್‌ ಜನರಲ್‌ ಹುದ್ದೆಯು ಅತ್ಯಂತ ಶ್ರೇಷ್ಠವಾದ ಗೌರವ ಮತ್ತು ಅಷ್ಟೇ ಗಂಭೀರವಾದ ಜವಾಬ್ದಾರಿ. ಈ ಅವಕಾಶ ನೀಡಿದ ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮ ಅವರಿಗೆ ಕೃತಜ್ಞತೆ’ ಎಂದು ಡಾ.ವಿವೇಕ್ ಮೂರ್ತಿ ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com