
ನವದೆಹಲಿ: ಅತ್ಯಾಚಾರ, ಕೊಲೆಯಂಥ ಗಂಭೀರ ಪ್ರಕರಣಗಳಲ್ಲಿ ಬಾಲಾರೋಪಿಗಳಿಗೂ ವಯಸ್ಕರಂತೇ ಶಿಕ್ಷೆ ನೀಡುವ ಕೇಂದ್ರದ ಪ್ರಸ್ತಾಪಕ್ಕೆ ನಿರ್ಭಯ ಹೆತ್ತವರು ಸ್ವಾಗತಿಸಿದ್ದಾರೆ. ಇದೊಂದು ಉತ್ತಮ ನಿರ್ಧಾರ.
ಶೀಘ್ರವೇ ಅದು ಜಾರಿಯಾಗಲಿ ಎಂದು ಅವರು ಪ್ರತಿಪಾದಿಸಿದ್ದಾರೆ. ವಯಸ್ಸಿನ ನೆಪದಲ್ಲಿ ಕಾನೂನಿನ ಕೈಗಳಿಂದ ನುಣುಚಿಕೊಳ್ಳಬಾರದು ಎಂದು ನಿರ್ಭಯಾ ತಂದೆ ಪ್ರತಿಕ್ರಿಯಿಸಿದ್ದಾರೆ.
ಬುಧವಾರದ ಕೇಂದ್ರ ಸಂಪುಟ ಸಭೆಯಲ್ಲಿ ಬಾಲ ನ್ಯಾಯಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಲಾಗಿತ್ತು. 16-18 ವರ್ಷದವರು ಹೀನ ಅಪರಾಧ ಎಸಗಿದರೆ, ವಯಸ್ಕರಂತೆಯೇ ಶಿಕ್ಷೆಗೆ ಗುರಿ ಮಾಡುವ ಪ್ರಸ್ತಾಪ
ಕಾಯ್ದೆಯಲ್ಲಿದೆ.
Advertisement