ತ್ರಿಶ್ಶೂರ್‌ಪೂರಂಗೆ ನಕಲಿ ಆನೆ ಬಳಸಿ: ಪಮೇಲಾ ಆ್ಯಂಡರ್‌ಸನ್

ಕೇರಳದ ಅತೀ ಪ್ರಸಿದ್ಧ ಜಾತ್ರೆ 'ತ್ರಿಶ್ಶೂರ್ ಪೂರಂ' ನಲ್ಲಿ ಆನೆಗಳನ್ನು ಬಳಸುವ ಬದಲು ಮರದಿಂದ ಮಾಡಿದ ನಕಲಿ ಆನೆಗಳನ್ನು...
ಪಮೇಲಾ ಆ್ಯಂಡ್ರಸನ್
ಪಮೇಲಾ ಆ್ಯಂಡ್ರಸನ್
Updated on

ತಿರುವನಂತಪುರಂ: ಕೇರಳದ ಅತೀ ಪ್ರಸಿದ್ಧ ಜಾತ್ರೆ 'ತ್ರಿಶ್ಶೂರ್ ಪೂರಂ' ನಲ್ಲಿ ಆನೆಗಳನ್ನು ಬಳಸುವ ಬದಲು ಮರದಿಂದ ಮಾಡಿದ ನಕಲಿ ಆನೆಗಳನ್ನು ಬಳಸಿ ಎಂದು ಹಾಲಿವುಡ್ ನಟಿ ಪಮೇಲಾ ಆ್ಯಂಡ್ರಸನ್ ಹೇಳಿದ್ದಾರೆ.  ನಾಳೆ (ಬುಧವಾರ) ಜಾತ್ರೆ ನಡೆಯಲಿದ್ದು ಅದರಲ್ಲಿ ನಕಲಿ ಆನೆಗಳನ್ನು ಬಳಸಿ ಎಂದ ನಟಿ ಈ ಬಗ್ಗೆ ಕೇರಳ ಮುಖ್ಯಮಂತ್ರಿ  ಉಮ್ಮನ್ ಚಾಂಡಿ ಮತ್ತು ಕೊಚ್ಚಿ ದೇವಸ್ವಂ ಮಂಡಳಿ ಅಧ್ಯಕ್ಷರಿಗೆ ಪತ್ರ ಬರೆದಿದ್ದಾಳೆ .
ಈ ಸಲಹೆ ಸ್ವೀಕೃತವಾದರೆ ಮರದಿಂದ ಮಾಡಿದ ಬೃಹತ್ ಆಕಾರದ 30 ಆನೆಗಳನ್ನು  ಖರೀದಿಸಲಿರುವ ದುಡ್ಡು ನೀಡಲಿದ್ದಾಳಂತೆ. ಪಮೇಲಾ ಎರಡು ದಿನಗಳ ಹಿಂದ ಇಮೇಲ್ ಕಳಿಸಿದ್ದು ಇದಕ್ಕೆ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಪ್ರಾಣಿ ಸಂರಕ್ಷಣಾ ಹೋರಾಟ ಸಮಿತಿ (ಪೇಟಾ) ಹೇಳಿದೆ.


ಪಮೇಲಾ ಬರೆದ ಪತ್ರದಲ್ಲಿ ಏನಿದೆ?

ಸನ್ಮಾನ್ಯ ಮುಖ್ಯಮಂತ್ರಿಗಳೇ,

ಆನೆಗಳ ಬಗ್ಗೆ ನಾನು ತುಂಬಾ ಕಾಳಜಿ ಹೊಂದಿದ್ದೇನೆ. ಪೇಟಾದವರಿಗೆ ಇದು ಗೊತ್ತು. ಭಾರತದ ಪ್ರಾಣಿ ಸಂರಕ್ಷಣಾ ಸಮಿತಿಯವರು  ಏಪ್ರಿಲ್ 29ಕ್ಕೆ ನಡೆಯುವ ತ್ರಿಶ್ಶೂರ್ ಜಾತ್ರೆಯಲ್ಲಿ ಆನೆಗಳನ್ನು ಬಳಸಬಾರದೆಂದು ಹೇಳಿದ್ದಾರೆ ಅಲ್ಲವೆ?

ನಾನು ಈ ತೀರ್ಮಾನವನ್ನು ಒಪ್ಪುತ್ತೇನೆ. ನಾನು ಈ ಜಾತ್ರೆಯ ಆಚರಣೆ, ಸಂಭ್ರಮಗಳನ್ನು ಗೌರವಿಸುತ್ತೇನೆ. ಬಹಳ ವರ್ಷಗಳ ಹಿಂದೆಯೇ ಆನೆಗಳನ್ನು ಮನುಷ್ಯರ ಉಪಯೋಗಕ್ಕಾಗಿ ಬಳಸತೊಡಗಿದೆವು. ಆದರೆ ಅದು ಬೇಡ. ಅದರ ಬದಲು ಮರದಿಂದ ಮಾಡಿದ ಆನೆಗಳನ್ನು ಬಳಸಿ. ಬಿದಿರಿನಿಂದ ಮಾಡಿದ ಈ ಆನೆಗಳ ಬೆಲೆ 10,000 ರು. ಇಂಥಾ 30 ಆನೆಗಳನ್ನು ಖರೀದಿಸುವ ದುಡ್ಡು ನಾನು ಕೊಡಲು ಸಿದ್ಧಳಾಗಿದ್ದೇನೆ.
ಕಳೆದ 15 ವರ್ಷಗಳಲ್ಲಿ ಕೇರಳದಲ್ಲಿ ಮಾತ್ರ ಆನೆಯಿಂದ ಸಾವನ್ನಪ್ಪಿದವರ ಸಂಖ್ಯೆ 500 ಆಗಿದೆ. ಆನೆಗಳ ಅಂಕುಶ ಅಥವಾ ಇನ್ಯಾವುದೇ ಆಯುಧಗಳಿಂದ ನೋವು ಮಾಡುವುದು ನನಗೆ ಬೇಸರ ತರಿಸುತ್ತದೆ.

ನಿಮ್ಮ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿ,
ಪಮೇಲಾ ಆ್ಯಂಡರ್‌ಸನ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com