ನೇಪಾಳದಲ್ಲಿ ದಿಢೀರ್ ಮಳೆ, ಬದುಕುಳಿದವರ ಬದುಕು ನರಕ

ಭೀಕರ ದುರಂತಕ್ಕೆ ಸಾಕ್ಷಿಯಾದ ನೇಪಾಳ ಈಗ ಅಕ್ಷರಶಃ ನರಕವಾಗಿದೆ. ಮಂಗಳವಾರ ದಿಢೀರ್ ಮಳೆ ಆರಂಭವಾಗಿದ್ದು, ಬದುಕುಳಿದವರ ಸ್ಥಿತಿ ಮತ್ತಷ್ಟು...
ನೇಪಾಳದಲ್ಲಿ ದಿಢೀರ್ ಮಳೆ, ಬದುಕುಳಿದವರ ಬದುಕು ನರಕ
Updated on

ಕಠ್ಮಂಡು: ಭೀಕರ ದುರಂತಕ್ಕೆ ಸಾಕ್ಷಿಯಾದ ನೇಪಾಳ ಈಗ ಅಕ್ಷರಶಃ ನರಕವಾಗಿದೆ. ಮಂಗಳವಾರ ದಿಢೀರ್ ಮಳೆ ಆರಂಭವಾಗಿದ್ದು, ಬದುಕುಳಿದವರ ಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದೆ.

ಭೀಕರ ಭೂಕಂಪದ ಬಳಿಕ ಗಾಯಕ್ಕೆ ಉಪ್ಪು ಸವರಿದಂತೆ ಅಲ್ಲಿ ಮತ್ತೆ ಮತ್ತೆ
ಮಳೆ ಸುರಿಯುತ್ತಿದ್ದು, ಮನೆ, ಮಠ ಕಳೆದುಕೊಂಡ ಜನ ಬಯಲು ಪ್ರದೇಶದಲ್ಲಿ ಟೆಂಟ್ ಹಾಕಿಕೊಂಡು ವಾಸವಾಗಿದ್ದಾರೆ. ಮಳೆಯಿಂದ ಟೆಂಟ್ ಗಳಿಗೆಲ್ಲಾ ನೀರು ನುಗ್ಗಿ ಜನರು ಪರದಾಡುವಂತಾಗಿದೆ.

ಈ ದಿಢೀರ್ ಮಳೆಯಿಂದ ರಕ್ಷಣಾ ಕಾರ್ಯಕ್ಕೂ ತೊಡಕಾಗಿದ್ದು, ಸಂತ್ರಸ್ಥರಿಗೆ ಬೇಕಾದ ಆಹಾರ, ನೀರು, ಟೆಂಟ್ ಗಳನ್ನು ಒದಗಿಸಲು ರಕ್ಷಣಾ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಈ ಮಧ್ಯೆ ನೇಪಾಳ ಸರ್ಕಾರದ ನಿಧಾನಗತಿಯ ರಕ್ಷಣಾ ಕಾರ್ಯದ ಬಗ್ಗೆ ತೀವ್ರ ಅಕ್ರೋಶ ವ್ಯಕ್ತಪಡಿಸಿರುವ ನೇಪಾಳಿಗರು, ತಾವೇ ಅವಶೇಷಗಳಡಿಯಲ್ಲಿ ಸಿಲುಕಿರುವವರ ರಕ್ಷಣೆಗೆ ಯತ್ನಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com