ವೆಬ್‌ಸೈಟ್‌ನಲ್ಲಿ ಪ್ರೇಮಪತ್ರ ಪ್ರಕಟಿಸಿ ಅವಾಂತರ ಸೃಷ್ಠಿಸಿದ ಟ್ರಾಯ್‌

ಅಂತರ್ಜಾಲ ತಟಸ್ಥ ನೀತಿ(ನೆಟ್ ನ್ಯೂಟ್ರಾಲಿಟಿ) ಜಾರಿಗೊಳಿಸಬೇಕೆಂದು ಭಾರತೀಯ ದೂರಸಂಪರ್ಕ ಪ್ರಾಧಿಕಾರ (ಟ್ರಾಯ್)ಗೆ ಮನವಿ ಸಲ್ಲಿಸಿದವರ...
ಟ್ರಾಯ್ ವೆಬ್‌ಸೈಟ್‌
ಟ್ರಾಯ್ ವೆಬ್‌ಸೈಟ್‌

ನವದೆಹಲಿ: ಅಂತರ್ಜಾಲ ತಟಸ್ಥ ನೀತಿ(ನೆಟ್ ನ್ಯೂಟ್ರಾಲಿಟಿ) ಜಾರಿಗೊಳಿಸಬೇಕೆಂದು ಭಾರತೀಯ ದೂರಸಂಪರ್ಕ ಪ್ರಾಧಿಕಾರ (ಟ್ರಾಯ್)ಗೆ ಮನವಿ ಸಲ್ಲಿಸಿದವರ ಹೆಸರು ಮತ್ತು ಇ-ಮೇಲ್ ಐಡಿಯನ್ನು ಪ್ರಕಟಿಸಿ ಜನರ ಆಕ್ರೋಶಕ್ಕೆ ಗುರಿಯಾಗಿದ್ದ ಟ್ರಾಯ್ ಇದೀಗ ತನ್ನ ವೆಬ್‌ಸೈಟ್‌ನಲ್ಲಿ ಪ್ರೇಮ ಪತ್ರ ಪ್ರಕಟಿಸಿ ಈಗ ಮತ್ತೊಂದು ಅವಾಂತರ ಸೃಷ್ಟಿಸಿದೆ.

ತಪ್ಪಾಗಿ ಪ್ರಾಧಿಕಾರದ ವಿಳಾಸಕ್ಕೆ ತಲುಪಿದ್ದ ಬಳಕೆದಾರರ ಪ್ರೇಮಪತ್ರವನ್ನೂ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಹತ್ತು ಲಕ್ಷ ಇಮೇಲ್‌ಗಳ ಪೈಕಿ ವಿಷಯಕ್ಕೆ ಸಂಬಂಧಿಸದ ಪತ್ರವನ್ನು ಪ್ರತ್ಯೇಕಿಸುವುದು ಸುಲಭದ ಕೆಲಸವಲ್ಲವಾದರೂ, ಟ್ರಾಯ್‌ ತನ್ನ ಗೌಪ್ಯ ನೀತಿಯನ್ನೇ ಗಾಳಿಗೆ ತೂರಿರುವುದು ಇದರಿಂದ ಸ್ಪಷ್ಟವಾಗುತ್ತದೆ.

ದೇಶದಲ್ಲಿ ನೆಟ್‌ ನ್ಯೂಟ್ರಾಲಿಟಿ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಟ್ರಾಯ್‌ ಮಾ.27ರಂದು ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಿತ್ತು. ಅಭಿಪ್ರಾಯ ತಿಳಿಸಲು ಏಪ್ರಿಲ್‌. 24ರ ಗಡುವು ವಿಧಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com