ನೇಪಾಳದಲ್ಲಿ ಭಗ್ನಗೊಂಡಿರುವ ದೇವಾಲಯಗಳ ಪುನರ್ ನಿರ್ಮಾಣ ಮಾಡ್ತೇವೆ: ವಿಎಚ್‌ಪಿ

ಪ್ರಬಲ ಭೂಕಂಪಕ್ಕೆ ನಲುಗಿರುವ ನೇಪಾಳದಲ್ಲಿ ಭಗ್ನಗೊಂಡಿರುವ ದೇವಾಲಯಗಳು ಹಾಗೂ ಮನೆಗಳ ಪುನರ್ ನಿರ್ಮಾಣ ಮಾಡುವುದಾಗಿ ವಿಶ್ವ ಹಿಂದೂ ಪರಿಷತ್(ವಿಎಚ್‌ಪಿ) ಹೇಳಿದೆ.
ಭಗ್ನಗೊಂಡಿರುವ ದೇವಾಲಯ
ಭಗ್ನಗೊಂಡಿರುವ ದೇವಾಲಯ

ನವದೆಹಲಿ: ಪ್ರಬಲ ಭೂಕಂಪಕ್ಕೆ ನಲುಗಿರುವ ನೇಪಾಳದಲ್ಲಿ ಭಗ್ನಗೊಂಡಿರುವ ದೇವಾಲಯಗಳು ಹಾಗೂ ಮನೆಗಳ ಪುನರ್ ನಿರ್ಮಾಣ ಮಾಡುವುದಾಗಿ ವಿಶ್ವ ಹಿಂದೂ ಪರಿಷತ್(ವಿಎಚ್‌ಪಿ) ಹೇಳಿದೆ.

ದೇಗುಲಗಳ ನಗರಿ ಎಂದೇ ಖ್ಯಾತಿ ಪಡೆದಿರುವ ನೇಪಾಳ ಪ್ರಕೃತಿಯ ವಿಕೋಪಕ್ಕೆ ನಲುಗಿ ಹೋಗಿದೆ. ನೊಂದ ಮನಸ್ಸುಗಳಿಗೆ ಸಾಂತ್ವನ ಹೇಳುವ ದೇಗುಲಗಳ ನಗರಿಯ ಶಾಂತಮಯ ವಾತಾವರಣವನ್ನು ಪುನರ್ ಸೃಷ್ಟಿಸುವುದಾಗಿ ವಿಎಚ್ ಪಿ ಅಂತಾರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ.

ಸಮಾಜ ಕಟ್ಟುವ ಕೆಲಸಕ್ಕೆ ಮುಂದಾಗಿರುವ ವಿಶ್ವ ಹಿಂದೂ ದೇಗುಲಗಳು, ಪ್ರಾರ್ಥನಾ ಮಂದಿರಗಳು, ಮನೆ, ಶಾಲೆ, ಸ್ಮಾರಕಗಳನ್ನು ಪುನರ್ ನಿರ್ಮಿಸುವುದರ ಜತೆಗೆ ನಿರ್ಗತಿಕ ಮಕ್ಕಳ ಭವಿಷ್ಯ ರೂಪಿಸಲು ಮುಂದಾಗಿದ್ದು, ಉಚಿತವಾಗಿ ಶಿಕ್ಷಣ ನೀಡುವುದಾಗಿ ವಿಎಚ್ ಪಿ ಘೋಷಿಸಿದೆ. ಸುಮಾರು 150ಕ್ಕೂ ಅಧಿಕ ವಸತಿ ಶಾಲೆಗಳು ಹಾಗೂ 50ಕ್ಕೂ ಅಧಿಕ ನಿರ್ಗತಿಕರ ಪುನರ್ವಸತಿ ಕೇಂದ್ರಗಳನ್ನು ಆರಂಭಿಸಲು ಯೋಜನೆ ರೂಪಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com