

ನವದೆಹಲಿ: ಬಹುಕೋಟಿ ಕಲ್ಲಿದ್ದಲು ಹಗರಣ ಸಂಬಂಧ ಕಾಂಗ್ರೆಸ್ ನಾಯಕ ಉದ್ಯಮಿ ನವೀನ್ ಜಿಂದಾಲ್, ಮಾಜಿ ಸಚಿವ, ದಾಸರಿ ನಾರಾಯಣರಾವ್, ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧುಕೋಡ ಸೇರಿದಂತೆ ಒಟ್ಟು 15 ಮಂದಿ ವಿರುದ್ಧ ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿದೆ. ಗುರುವಾರದಿಂದ ಆರೋಪಿಗಳ ವಿಚಾರಣೆ ಆರಂಭವಾಗಲಿದೆ.
ಜಿಂದಾಲ್ ಉಕ್ಕು ಕಾರ್ಖಾನೆಗೆ 2008 ರಲ್ಲಿ ಜಾರ್ಖಂಡ್ ಬಿರ್ ಭೂಮ್ ಜಿಲ್ಲೆಯ ಅಮರ್ಕೊಂಡ ಮುರ್ಗಾದಂಗಲ್ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಮಾಡಿದ ಸಂಬಂಧ ಬುಧವಾರ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
2007 ರಂದು ಜಿಂದಾಲ್ ಕಂಪನಿ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು.