ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್
ದೇಶ
ಹಿಂದೂ ಭಯೋತ್ಪಾದನೆ ರಾಜನಾಥ್ ವಿರುದ್ಧ ಕಿಡಿ
ಗೃಹ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ಸಂಸತ್ತಲ್ಲಿ ಹಿಂದೂ ಭಯೋತ್ಪಾದನೆ ವಿಚಾರ ಪ್ರಸ್ತಾಪಿಸಿದ್ದು ಕಾಂಗ್ರೆಸ್‍ನ ಆಕ್ರೋಶಕ್ಕೆ ಕಾರಣವಾಗಿದೆ...
ನವದೆಹಲಿ: ಗೃಹ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ಸಂಸತ್ತಲ್ಲಿ ಹಿಂದೂ ಭಯೋತ್ಪಾದನೆ ವಿಚಾರ ಪ್ರಸ್ತಾಪಿಸಿದ್ದು ಕಾಂಗ್ರೆಸ್‍ನ ಆಕ್ರೋಶಕ್ಕೆ ಕಾರಣವಾಗಿದೆ.
ರಾಜನಾಥ್ ಅವರ ಈ ಹೇಳಿಕೆ ಸಂದರ್ಭೋಚಿತವಾಗಿಲ್ಲ ಎಂದು ಆರೋಪಿಸಿದೆ. ಮಾಜಿ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ ಹಿಂದೂ ಭಯೋತ್ಪಾದನೆ ಬಗ್ಗೆ ಸಂಸತ್ ನಲ್ಲಿ ಯಾವತ್ತೂ ಹೇಳಿಕೆ ನೀಡಿಲ್ಲ. ಅವರು ಮಾತನಾಡಿದ್ದು ಪಕ್ಷದ ಜೈಪುರ ಸಮಾವೇಶದಲ್ಲಿ. ಅಲ್ಲದೆ, ಆ ಹೇಳಿಕೆಯನ್ನು ವಾಪಸ್ ಕೂಡ ಪಡೆದುಕೊಳ್ಳಲಾಗಿದೆ ಎಂದು ಕಾಂಗ್ರೆಸ್ ವಾದಿಸಿದೆ. ಸ್ವತಃ ಶಿಂದೆ ಶನಿವಾರ ಇದನ್ನೇ ಪುನರುಚ್ಚರಿಸಿದ್ದಾರೆ. ಸೋಮವಾರ ಸರ್ವಪಕ್ಷ ಸಭೆ ನಡೆಯಲಿದ್ದು ಇದು ಯಶಸ್ವಿಯಾಗುವ ಸಾಧ್ಯತೆ ಕಡಿಮೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ