

ನವದೆಹಲಿ: ಮಹಿಳೆಯರ ಮೇಲಿನ ದೌರ್ಜನ್ಯಗಳ ಬಗ್ಗೆ ರೋಸಿಹೋಗಿರುವ ಮಹಿಳಾ ಐಎಎಸ್ ಅಧಿಕಾರಿ ರಿಜು ಬಫ್ನ ಅವರು ತಮ್ಮ ಫೇಸ್ ಬುಕ್ ನಲ್ಲಿ ಈ ದೇಶದಲ್ಲಿ ಹೆಣ್ಣು ಮಕ್ಕಳೇ ಹುಟ್ಟದಿರಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ಮಹಿಳೆಯರ ಮೇಲಿನ ದೌರ್ಜನ್ಯಗಳ ಬಗ್ಗೆ ರೋಸಿಹೋಗಿರುವ ಈ ಮಹಿಳೆ ತನ್ನ ಆಕ್ರೋಶವನ್ನ ಈ ರೀತಿ ಹೊರಹಾಕಿದ್ದು, ರಿಜು ಬಫ್ನ (Riju Bafna) ಹೀಗೆ ಫೇಸ್ ಬುಕ್‘ನಲ್ಲಿ ಹಾಕುತ್ತಿದ್ದಂತೆ ಆಕೆಯನ್ನು ಬೆಂಬಲಿಸಿ ಸಾವಿರಾರು ಜನರು ದನಿ ಎತ್ತಿದ್ದಾರೆ.
ಈ ದೇಶದಲ್ಲಿನ ಪ್ರತಿ ಮಹಿಳೆ, ಪ್ರತಿ ಹಂತದಲ್ಲೂ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗುತ್ತಿದ್ದಾಳೆ. ಆಕೆಗೆ ರಕ್ಷಣೆಯೇ ಇಲ್ಲದಂತಾಗಿದೆ. ಇದಕ್ಕೆಲ್ಲಾ ಕಡಿವಾಣ ಹಾಕಲು ಆಸಾಧ್ಯವಾಗಿರುವುದರಿಂದ ಆ ದೇವರಲ್ಲಿ ಬೇಡಿಕೊಳ್ಳುವುದಿಷ್ಟೆ, ಇನ್ನೆಂದೂ ಈ ನೆಲದಲ್ಲಿ ಹೆಣ್ಣು ಮಕ್ಕಳನ್ನು ಹುಟ್ಟಿಸಬೇಡ’ ಎಂದು ಮಹಿಳಾ ಐಎಎಸ್ ಅಧಿಕಾರಿ ರಿಜು ಬಫ್ನ ತನ್ನ ನೋವಿನ ನುಡಿಗಳನ್ನು ತೆರೆದಿಟ್ಟಿದ್ದಾರೆ.
ಮಧ್ಯಪ್ರದೇಶದ ಮಾನವ ಹಕ್ಕು ಆಯೋಗದ ಸದಸ್ಯನೊಬ್ಬ ನನಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದೆ. ಇದಕ್ಕೆ ಸಂಬಂಧಿಸಿದಂತೆ ಅಶ್ಲೀಲ ಸಂದೇಶ ಕಳುಹಿಸಿದ್ದ ವ್ಯಕ್ತಿಯ ವಿರುದ್ದ ಕ್ರಮ ಕೈಗೊಂಡ ಆಯೋಗ ಆತನನ್ನು ಅಮಾನತುಗೊಳಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೋರ್ಟ್‘ ನಲ್ಲಿ ವಿಚಾರಣೆಗೆ ಹಾಜರಾದ ಸಂದರ್ಭದಲ್ಲಿ ಪ್ರತಿ ವಾದಿ ವಕೀಲರ ನಡವಳಿಕೆಯೂ ನನಗೆ ಅತೀವ ಬೇಸರ ತರಿಸಿದೆ ಎಂದಿದರುವ ರಿಜು ಬಫ್ನ, ನಮ್ಮ ವ್ಯವಸ್ಥೆಯ ಕುರಿತು ಕಿಡಿಕಾರಿದ್ದಾರೆ.