ಚಾರ್ ಮಿನಾರ್ ನೆಲಸಮಗೊಳಿಸಲು ತೆಲಂಗಾಣ ಸರ್ಕಾರದ ಚಿಂತನೆ?

ತೆಲಂಗಾಣ ಸರ್ಕಾರ ಐತಿಹಾಸಿಕ ಸ್ಮಾರಕ ಚಾರ್ ಮಿನಾರ್ ಅನ್ನು ನೆಲಸಮಗೊಳಿಸಲು ಚಿಂತಿಸುತ್ತಿದೆ ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದೆ...
ಚಾರ್ ಮಿನಾರ್
ಚಾರ್ ಮಿನಾರ್

ಹೈದರಾಬಾದ್: ತೆಲಂಗಾಣ ಸರ್ಕಾರ ಐತಿಹಾಸಿಕ ಸ್ಮಾರಕ ಚಾರ್ ಮಿನಾರ್ ಅನ್ನು ನೆಲಸಮಗೊಳಿಸಲು ಚಿಂತಿಸುತ್ತಿದೆ ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದೆ.  

16 ನೇ ಶತಮಾನದ ಪ್ರಸಿದ್ದ ಐತಿಹಾಸಿಕ ಸ್ಮಾರಕಗಳಲ್ಲೊಂದಾದ ಚಾರ್ ಮಿನಾರ್ ಹಳೇಯ ಹೈದರಾಬಾದ್ ಪ್ರಮುಖ ಪ್ರವಾಸಿ ಸ್ಥಳ. ಇಂಥ ಇತಿಹಾಸ ಹೊಂದಿರುನ ಚಾರ್ ಮಿನಾರ್ ಗೋಪುರವನ್ನು ತುಂಬಾ ಹಳೇಯ ಕಟ್ಟಡ ಎಂಬ ನೆಪವೊಡ್ಡಿ ಕೆಡವಲು ಸರ್ಕಾರ ಹುನ್ನಾರ ನಡೆಸುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಆದರೆ ತೆಲಂಗಾಣ ಉಪಮುಖ್ಯಮಂತ್ರಿ ಮೊಹಮದ್ ಅಲಿ ಹೇಳುವ ಪ್ರಕಾರ ಹೈದರಾಬಾದ್ ನಲ್ಲಿ ಹಲವು ಪುರಾತನ ಕಟ್ಟಡ ಹಾಗೂ ಸ್ಮಾರಕಗಳಿಗೆ. ಅವುಗಳಲ್ಲಿ ಕೆಲವೊಂದು ಶಿಥಿಲಾವಸ್ಥೆ ತಲುಪಿವೆ. ಅಂಥಹ ಪಟ್ಟಿಯಲ್ಲಿ ಚಾರ್ ಮಿನಾರ್ ಕೂಡ ಸೇರಿದೆ. ಒಂದು ವೇಳೆ ಯಾವುದೋ ಸಮಯದಲ್ಲಿ ತುಂಬಾ ಹಳೇಯದಾಗಿರುವ ಚಾರ್ ಮಿನಾರ್ ಕುಸಿದು ಬಿದ್ದರೆ ಅಪಾರ ಪ್ರಮಾಣದ ಸಾವು ನೋವುಗಳಾಗುವ ಸಂಭವವಿದೆ. ಚಾರ್ ಮಿನಾರ್ ಶಿಥಿಲಾವಸ್ಥೆ ತಲುಪಿದರೆ ಮುಂದಿನ  ದಿನಗಳಲ್ಲಿ ಚಾರ್ ಮಿನಾರ್ ನೆಲಸಮ ಮಾಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಇನ್ನು ಹಳೇಯ ಹೈದರಾಬಾದ್ ನಲ್ಲಿರುವ 90 ವರ್ಷ ಹಳೇಯದಾದ ಒಸ್ಮಾನಿಯಾ ಜನರಲ್ ಆಸ್ಪತ್ರೆಯನ್ನು ನೆಲಸಮಗೊಳಿಸಿ ಮತ್ತೆ ಹೊಸದಾಗಿ  ಆಸ್ಪತ್ರೆ ನಿರ್ಮಾಣ ಮಾಡಲು ಯೋಜನೆ ರೂಪುಗೊಂಡಿದೆ. ಹೊಸ ಆಸ್ಪತ್ರೆ ಈಗಿರುವ ಆಸ್ಪತ್ರೆಯ 10 ಪಟ್ಟು ದೊಡ್ಡದಾಗಿ ನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆ.

ಒಸ್ಮಾನಿಯಾ ಜನರಲ್ ಆಸ್ಪತ್ರೆ ಪುನರ್ ನಿರ್ಮಾಣ ಹಾಗೂ ಚಾರ್ ಮಿನಾರ್ ಧ್ವಂಸ ವಿಷಯ ಸಂಬಂಧ ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತ ಪಡಿಸಿವೆ. ಸಾಂಸ್ಕೃತಿಕ ಪರಂಪರೆಯಾಗಿರು ಚಾರ್ ಮಿನಾರ್ ನೆಲಸಮಗೊಳಿಸಬಾರದು ಎಂದು ಆಗ್ರಹಿಸಿವೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com