
ಚೆನ್ನೈ: ಚೆನ್ನೈನಲ್ಲಿರುವ ಪಚೈಯಪ್ಪಾಸ್ ಕಾಲೇಜುನ ವಿದ್ಯಾರ್ಥಿಗಳು ಚೀಟ್ ಪೇಟೆಯ ಬಳಿ ಇದ್ದ ಥಾಸ್ಮಾಕ್ ಮಧ್ಯದಂಗಡಿಗೆ ದಾಂಗುಡಿ ಇಟ್ಟು ಧ್ವಂಸ ಮಾಡಿದ್ದಾರೆ.
ಕಾಲೇಜು ಸಮೀಪದಲ್ಲೇ ಮದ್ಯದಂಗಡಿ ಇದ್ದುದ್ದರಿಂದ ಕಾಲೇಜಿನ 100 ವಿದ್ಯಾರ್ಥಿಗಳು ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಅಂಗಡಿ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಇನ್ನು ಕೆಲವರು ಹಿಂಬದಿಯಿಂದ ಅಂಗಡಿಯೊಳಕ್ಕೆ ನುಗ್ಗಿ ಮದ್ಯ ಬಾಟಲಿಗಳನ್ನು ಹೊಡೆದುಹಾಕಿದ್ದಾರೆ.
ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಚ್ ಮಾಡಿದ್ದಾರೆ. ಈ ಎಲ್ಲಾ ದೃಶ್ಯಾವಳಿಗಳನ್ನು ಟಿವಿ ಸುದ್ದಿ ವಾಹಿನಿಗಳು ನೇರ ಪ್ರಸಾರ ಮಾಡಿವೆ.
ಒಂದು ಗಂಟೆ ನಂತರ ಪೊಲೀಸರು ಮದ್ಯದಂಗಡಿಯ ಬಾಗಿಲನ್ನು ತೆರೆದು ಒಳಗೆ ಸಿಕ್ಕಿ ಹಾಕಿಕೊಂಡಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ನಂತರ ಸ್ಧಳೀಯವಾಗಿ ವಾಸಿಸುತ್ತಿದ್ದ ಜನರು ಹೊರಗಡೆ ಚೆಲ್ಲಾಡಿದ್ದ ಮದ್ಯದ ಬಾಟಲಿಗಳಿಗೆ ಬೆಂಕಿ ಹಾಕಿದ್ದಾರೆ.
Advertisement