ಜಮ್ಮು-ಕಾಶ್ಮೀರ ಸರ್ಕಾರದಿಂದ 21 ಸರ್ಕಾರಿ ಅಧಿಕಾರಿಗಳ ಅಮಾನತು

ಕರ್ತವ್ಯದಿಂದ ಅನಧಿಕೃತವಾಗಿ ಗೈರುಹಾಜರಾಗಿದ್ದ 21 ಸರ್ಕಾರಿ ಅಧಿಕಾರಿಗಳನ್ನು ಜಮ್ಮು-ಕಾಶ್ಮೀರ ಸರ್ಕಾರ ಅಮಾನತುಮಾಡಿದೆ.
ಅಮಾನತು ಅಧಿಕಾರಿಗಳ ಅಮಾನತು(ಸಾಂಕೇತಿಕ ಚಿತ್ರ)
ಅಮಾನತು ಅಧಿಕಾರಿಗಳ ಅಮಾನತು(ಸಾಂಕೇತಿಕ ಚಿತ್ರ)

ಶ್ರೀನಗರ: ಕರ್ತವ್ಯದಿಂದ ಅನಧಿಕೃತವಾಗಿ ಗೈರುಹಾಜರಾಗಿದ್ದ 21 ಸರ್ಕಾರಿ ಅಧಿಕಾರಿಗಳನ್ನು ಜಮ್ಮು-ಕಾಶ್ಮೀರ ಸರ್ಕಾರ ಅಮಾನತುಮಾಡಿದೆ.

ಜಮ್ಮು-ಕಾಶ್ಮೀರದ ಗಂದೆರ್‌ಬಲ್ ಪುರಸಭೆ ಸಮಿತಿ ಕಚೇರಿಗೆ ದಿಢೀರ್ ಭೇಟಿ ನೀಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಸೈಯದ್ ಶಾನವಾಜ್ ಬುಖಾರಿ, ಅಧಿಕಾರಿಗಳು ಕರ್ತವ್ಯಕ್ಕೆ ಅನಧಿಕೃತವಾಗಿ ಗೈರುಹಾಜರಾಗುತ್ತಿದ್ದುದ್ದನ್ನು ಗಮನಿಸಿ 21 ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ ಎಂದು ಸರ್ಕಾರದ ವಕ್ತಾರರೊಬ್ಬರು ಮಾಹಿತಿ ನೀಡಿದ್ದಾರೆ.      

ಅನಧಿಕೃತವಾಗಿ ಗೈರು ಹಾಜರಾಗುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು  ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಎಚ್ಚರ ವಹಿಸಬೇಕೆಂದು ಸೈಯದ್ ಶಾನವಾಜ್ ಬುಖಾರಿ, ಪುರಸಭೆಯ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚನೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com