ರಾಷ್ಟ್ರೀಯ ಹಿತಾಸಕ್ತಿಗೆ ಹೆಚ್ಚು ಆದ್ಯತೆ ನೀಡಿ; ಮಾಧ್ಯಮಗಳಿಗೆ ಅಜಿತ್ ದೋವಲ್ ಸಲಹೆ

ಬೇರೆ ವಿಷಯಗಳಿಗಿಂತ ರಾಷ್ಟ್ರೀಯ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮಾಧ್ಯಮಗಳಿಗೆ ಸಲಹೆ ನೀಡಿದ್ದಾರೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್(ಸಂಗ್ರಹ ಚಿತ್ರ)
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್(ಸಂಗ್ರಹ ಚಿತ್ರ)
Updated on

ಮುಂಬೈ: ಮಾಧ್ಯಮ ಎಂಬುದು ಕುತೂಹಲಕಾರಿ ಮನರಂಜನೆ ಎಂದಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಬೇರೆ ವಿಷಯಗಳಿಗಿಂತ ರಾಷ್ಟ್ರೀಯ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಮಾಧ್ಯಮಗಳಿಗೆ ಸಲಹೆ ನೀಡಿದ್ದಾರೆ.

ಮುಂಬೈ ನಲ್ಲಿ ಲಲಿತ್ ದೋಶಿ ಸ್ಮಾರಕದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಜಿತ್ ದೋವಲ್, ಮಾಧ್ಯಮದ ಬಗ್ಗೆ ಸಭಿಕರ ಪ್ರಶ್ನೆಗೆ ಉತ್ತರಿಸಿದ್ದು ತಮಗೆ ಮಾಧ್ಯಮಗಳೆಂದರೆ ಕುತೂಹಲಕಾರಿ ಮನರಂಜೆ ಎಂದು ಹೇಳಿದ್ದಾರೆ. ಮಾಧ್ಯಮಗಳ್ ಸಲಹೆ ಸರಿ ಇರಬಹುದು, ಆದರೆ ಸರಿಯಾದ ವಿಷಯವನ್ನೇ ಹೇಗೆ ತಪ್ಪಾಗಿ ಹೇಳಿ ಜನರಿಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದನ್ನು ಗಮನಿಸಬೇಕು ಎಂದಿದ್ದಾರೆ.     
ಬಹುಶಃ  ಮಾಧ್ಯಮಗಳಿಗೆ ತಮ್ಮದೇ ಅದ ನಿರ್ಬಂಧಗಳಿರಬೇಕು, ಹೆಚ್ಚು ಮಾರಾಟವಾಗುವ ಸುದ್ದಿಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಅಂತಿಮವಾಗಿ ನನ್ನ ಆದ್ಯತೆ ಏನು ಎಂಬುದು ನನಗೆ ತಿಳಿದಿದೆ ಅದನ್ನು ಮತ್ತೊಬ್ಬರ ಮೇಲೆ ಏಕೆ ಹೇರಬೇಕು ಎಂದು ಅಜಿತ್ ದೋವಲ್ ಪ್ರಶ್ನಿಸಿದ್ದಾರೆ.
ಕೆಲವು ಸಂದರ್ಭದಲ್ಲಿ ರಾಷ್ಟ್ರೀಯ ಹಿತಾಸಕ್ತಿಯೇ ಎಲ್ಲದಕ್ಕೂ ಮಿಗಿಲಾಗಿರುತ್ತದೆ. ನಾವು ಮುಳುಗಿದರೆ ನಮ್ಮ ಜೊತೆಯಲ್ಲೇ ಮಾಧ್ಯಮದ ಅಭಿವ್ಯಕ್ತಿ ಸ್ವಾತಂತ್ರ್ಯ ಸಹ ಮುಳುಗಲಿದೆ ಎಂದು ದೋವಲ್ ಅಭಿಪ್ರಾಯಪಟ್ಟಿದ್ದಾರೆ.  ಸಿನಿಕತೆಯನ್ನು ಸೃಷ್ಠಿಸುವುದಕ್ಕಿಂತ, ಬಲಿಷ್ಠ ರಾಷ್ಟ್ರವನ್ನು ನಿರ್ಮಿಸಿ ಎಂದು ಮಾಧ್ಯಮಗಳಿಗೆ ದೋವಲ್ ಸಲಹೆ ನೀಡಿದ್ದಾರೆ.
ಜನರು ಯಾವುದನ್ನು ಹೆಚ್ಚು ಓದುತ್ತಾರೋ ಅದನ್ನೇ ಮಾಧ್ಯಮದವರು ಹೆಚ್ಚು ಬರೆಯಲು ಪ್ರಾರಂಭಿಸುತ್ತಾರೆ. ಮಾಧ್ಯಮದವರು ಏನೇ ಬರೆದರೂ ಜನರು ಮತ್ತಷ್ಟು ಓದುತ್ತಾರೆ ಇದೊಂದು ವಿಷವರ್ತುಲದಂತಾಗಿದ್ದು ಗಂಭೀರ ಪತ್ರಿಕೋದ್ಯಮದ ಗತಿಯೇನು ಎಂದು ದೋವಲ್ ಪ್ರಶ್ನಿಸಿದ್ದಾರೆ.  ಆದರೂ ಮಾಧ್ಯಮಗಳಲ್ಲಿ ಕೆಲವು ಶ್ರೇಷ್ಠ ಪತ್ರಕರ್ತರಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com