ಮಹಿಳಾ ಸಬಲೀಕರಣವಿಲ್ಲದೆ ಬಿಹಾರ ಅಭಿವೃದ್ಧಿಗೊಳ್ಳಲು ಸಾಧ್ಯವಿಲ್ಲ: ನಿತೀಶ್ ಕುಮಾರ್

ಬಿಹಾರದ ಅರ್ಧದಷ್ಟು ಜನಸಂಖ್ಯೆಯಲ್ಲಿ ಮಹಿಳೆಯರ ಪಾತ್ರವಿದ್ದು, ಮಹಿಳೆಯರ ಅಭಿವೃದ್ಧಿಯಿಲ್ಲದೆ ಬಿಹಾರ ರಾಜ್ಯ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯವಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶುಕ್ರವಾರ ಹೇಳಿದ್ದಾರೆ...
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್

ಪಾಟ್ನ: ಬಿಹಾರದ ಅರ್ಧದಷ್ಟು ಜನಸಂಖ್ಯೆಯಲ್ಲಿ ಮಹಿಳೆಯರ ಪಾತ್ರವಿದ್ದು, ಮಹಿಳೆಯರ ಅಭಿವೃದ್ಧಿಯಿಲ್ಲದೆ ಬಿಹಾರ ರಾಜ್ಯ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯವಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶುಕ್ರವಾರ ಹೇಳಿದ್ದಾರೆ.

ಈ ಕುರಿತಂತೆ ಬಿಹಾರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಿಳೆಯರ ಅಭಿವೃದ್ಧಿ ಕಾಣಬೇಕಿರುವುದು ಅವಶ್ಯವಿದ್ದು, ಬಿಹಾರದಲ್ಲಿ ಈಗಾಗಲೇ ಮಹಿಳೆಯರಿಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಲಾಗಿದೆ. ಶಿಕ್ಷಕರ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿಯನ್ನು ನೀಡಲಾಗಿದ್ದು, ಶಾಲೆಯಲ್ಲಿ ಬಾಲಕಿಯರಿಗಾಗಿ ಸೈಕಲ್ ಹಾಗೂ ಬಟ್ಟೆಗಳ ಯೋಜನೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಬ್ಯಾಂಕ್ ನಲ್ಲಿ ಹಣದ ಹೂಡಿಕೆ ಕುರಿತಂತೆ ಮಾತನಾಡಿರುವ ಅವರು, ರಾಜ್ಯದಲ್ಲಿ ಸಾಕಷ್ಟು ಮಂದಿಗೆ ಬ್ಯಾಂಕ್ ನಲ್ಲಿ ಹಣ ಹೂಡುವುದರ ಕುರಿತಂತಷ್ಟೇ ತಿಳುವಳಿಕೆ ಇದೆ. ಆದರೆ, ಆ ಹಣವನ್ನು ಬಂಡವಾಳ ಮಾರುಕಟ್ಟೆಯಲ್ಲಿ ಹೂಡುವುದರ ಕುರಿತಂತೆ ಅರಿವೇ ಇಲ್ಲ. ಈ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com