
ಚೆನ್ನೈ: ರಾಷ್ಟ್ರೀಯ ಕೈಮಗ್ಗ ದಿನಾಚರಣೆಗೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.
ಚೆನ್ನೈನಲ್ಲಿರುವ ಮದ್ರಾಸ್ ವಿಶ್ವವಿದ್ಯಾಲಯದ ಶತಮಾನೋತ್ಸವ ಭವನದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮವನ್ನು ಮೋದಿ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಬಡತನದ ವಿರುದ್ಧ ಹೋರಾಡುವುದಕ್ಕೆ ಕೈಮಗ್ಗ ಅಸ್ತ್ರವಾಗುವುದಕ್ಕೆ ಸಾಧ್ಯವಿದೆ ಎಂದು ಹೇಳಿದ್ದಾರೆ.
ಸ್ವಾತಂತ್ರ್ಯ ಹೋರಾಟದಲ್ಲಿ ಕೈಮಗ್ಗ ಒಂದು ಅಸ್ತ್ರವಾಗಿತ್ತು. ಈಗ ಅದೇ ಅಸ್ತ್ರವನ್ನು ಬಳಸಿಕೊಂಡು ಬಡತನ ನಿರ್ಮೂಲನೆಗೆ ಪ್ರಯತ್ನಿಸೋಣ ಎಂದ ಅವರು, ಮನ್ ಕೀ ಬಾತ್ ನಲ್ಲಿ ಖಾದಿ ಖರೀದಿಗೆ ಮನವಿ ಮಾಡಿದ್ದೆ. ದೇಶದ ಜನತೆ ನನ್ನ ಮನವಿಯನ್ನು ಸ್ವೀಕರಿಸಿದ್ದಾರೆ.ಕೈಮಗ್ಗದ ವಹಿವಾಟು ಶೇಕಡ 33ರಷ್ಟು ಹೆಚ್ಚಾಗಿದ್ದು, ಪರಿಸರ ಸಂರಕ್ಷಣೆಯಲ್ಲಿ ಕೈಮಗ್ಗದ ಪಾತ್ರ ಮಹತ್ವದ್ದಾಗಿದೆ ಎಂದಿದ್ದಾರೆ.
ಮದುವೆ ಸಮಾರಂಭದಲ್ಲಿ ಖಾದಿ ಬಟ್ಟೆ ಧರಿಸಲು ಕರೆ ನೀಡಿರುವ ಮೋದಿ, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
1905ರ ಸ್ವದೇಶಿ ಚಳುವಳಿ ನೆನಪಿಗಾಗಿ ಆಗಸ್ಟ್ 7ನ್ನು ಕೈಮಗ್ಗ ದಿನಾಚರಣೆಯನ್ನಾಗಿ ಕೇಂದ್ರ ಸರ್ಕಾರ ಘೋಷಿಸಲಿದೆ. ಈ ಸಮಾರಂಭಧಲ್ಲಿ ಕೈಮಗ್ಗ ಕ್ಷೇತ್ರದ 2012, 2013 ಮತ್ತು 2014ನೇ ಸಾಲಿನ ಸಾಧಕರಿಗೆ ದಂತ ಕವಿ ಮತ್ತು ರಾಷ್ಟ್ರೀಯ ಪ್ರಶಸ್ತಿಯನ್ನು ಮೋದಿ ಪ್ರಧಾನ ಮಾಡಲಿದ್ದಾರೆ. ಇದೇ ವೇಳೆ ಭಾರತೀಯ ಕೈಮಗ್ಗ ಬ್ರ್ಯಾಂಡ್ ನ್ನು ಬಿಡುಗಡೆ ಮಾಡಲಿದ್ದಾರೆ.
Advertisement