
ನವದೆಹಲಿ: ಸಾಮಾಜಿಕ ಜಾಲತಾಣ ಫೆಸ್ ಬುಕ್ ನ ಜನಪ್ರಿಯತೆ ಪಟ್ಟಿಯಲ್ಲಿ ಭಾರತೀಯ ಸೇನೆ ಅಗ್ರಸ್ಥಾನ ಪಡೆದಿದೆ. ಭಾರತೀಯ ಸೇನೆಯ ಜನಪ್ರಿಯತೆ ಸಿಐಎ, ಎಫ್.ಬಿ.ಐ, ನಾಸಾ ಸಂಸ್ಥೆಗಳ ಜನಪ್ರಿಯತೆಯನ್ನೂ ಹಿಂದಿಕ್ಕಿದೆ.
ಸತತ ಎರಡನೇ ಬಾರಿ ಭಾರತೀಯ ಸೇನೆ ಫೇಸ್ ಬುಕ್ ನಲ್ಲಿ ಅತಿ ಹೆಚ್ಚು ಜನಪ್ರಿಯತೆಯನ್ನು ಪಡೆದಿದ್ದು ಅತಿ ಹೆಚ್ಚು ಜನರು ಭಾರತೀಯ ಸೇನೆ ಬಗ್ಗೆ ಮಾತನಾಡುತ್ತಿದ್ದಾರೆ. ಕಳೆದ ಎರಡು ತಿಂಗಳ ಹಿಂದೆಯೂ ಭಾರತಿಯ ಸೇನೆ ಫೇಸ್ ಬುಕ್ ಪೇಜ್ ಅತಿ ಹೆಚ್ಚು ಪಿಟಿಎಟಿಯನ್ನು(ಪೀಪಲ್ ಟಾಕಿಂಗ್ ಅಬೌಟ್ ದಟ್) ರ್ಯಾಂಕಿಂಗ್ ಹೊಂದಿತ್ತು.
ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಭಾರತೀಯ ಸೇನೆಯ, ಸೇನೆ ಪೇಜ್ ಗೆ ನಿಜವಾದ ಲೈಕ್ ಗಳು ಬರುತ್ತಿವೆ ಎಂದು ಹೇಳಿದೆ. ಪೇಜ್ ಬಗ್ಗೆ ಮಾತನಾಡುವ ಜನರ ಸಂಖ್ಯೆಯನ್ನು ಆಧರಿಸಿ ಪಿಟಿಎಟಿ ರ್ಯಾಂಕಿಂಗ್ ನ್ನು ನಿರ್ಧರಿಸಲಾಗುತ್ತದೆ. ಭಾರತೀಯ ಸೇನೆಯ ಫೇಸ್ ಬುಕ್ ಪೇಜ್ ಗೆ ಮಾತ್ರವಲ್ಲದೆ ವೆಬ್ ಸೈಟ್ ಗೂ ಉತ್ತಮ ಜನಪ್ರಿಯತೆ ವ್ಯಕ್ತವಾಗುತ್ತಿದ್ದು. ಪ್ರತಿ ವಾರ 25 ಲಕ್ಷ ಹಿಟ್ಸ್ ಬರುತ್ತಿವೆ.
2013 ರ ಜೂ.1 ರಂದು ಪ್ರಾರಂಭವಾದ ಸೇನೆಯ ಫೇಸ್ ಬುಕ್ ಪೇಜ್, ಈ ವರೆಗೂ 2 .9 ಮಿಲಿಯನ್ ಲೈಕ್ ಪಡೆದಿದೆ. ಜಿಯೋಲೊಕೇಶನ್ ಮೂಲಕ ಅಕೌಂಟ್ ಗಳನ್ನು ಪರಸ್ಪರ ಬ್ಲಾಕ್ ಮಾಡುವ ಮೂಲಕ ಫೇಸ್ ಬುಕ್ ಪೇಜ್ ನಲ್ಲೂ ಭಾರತೀಯ ಸೇನೆ, ಪಾಕಿಸ್ತಾನ ಸೇನೆ ಸಮರ ನಡೆಸುತ್ತಿದ್ದದ್ದು ವಿಶೇಷವಾಗಿತ್ತು.
ಜಿಯೋಲೋಕೇಶನ್ ಮೂಲಕ ಅಕೌಂಟ್ ಬ್ಲಾಕ್ ಮಾಡುವುದರಿಂದ ಪಾಕಿಸ್ತಾನದಲ್ಲಿರುವ ವ್ಯಕ್ತಿ ಭಾರತೀಯ ಸೇನೆಯ ಫೇಸ್ ಬುಕ್ ಪೇಜ್ ನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ, ಅಂತೆಯೇ ಭಾರತಲ್ಲಿರುವ ವ್ಯಕ್ತಿಗೆ ಪಾಕಿಸ್ತಾನದ ಸೇನೆಯ ಫೇಸ್ ಬುಕ್ ಪೇಜ್ ನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ.
Advertisement