ತೆಲಂಗಾಣದ ಮೆಹಬೂಬ್ ನಗರದಲ್ಲಿ ವಜ್ರದ ನಿಕ್ಷೇಪ ವಲಯ ಪತ್ತೆ?

ವಜ್ರಗಳ ಜಗತ್ತಿನಲ್ಲಿ ವಿಶಿಷ್ಟ ಸ್ಥಾನ ಹೊಂದಿರುವ ಗೋಲ್ಕೊಂಡಾ ನಗರದ ಮಾದರಿಯ ಮತ್ತೊಂದು ಪ್ರದೇಶ ತೆಲಂಗಾಣ ರಾಜ್ಯದಲ್ಲಿ ಪತ್ತೆಯಾಗಿದೆ.
ವಜ್ರ(ಸಾಂಕೇತಿಕ ಚಿತ್ರ)
ವಜ್ರ(ಸಾಂಕೇತಿಕ ಚಿತ್ರ)

ತೆಲಂಗಾಣ: ವಜ್ರಗಳ ಜಗತ್ತಿನಲ್ಲಿ ವಿಶಿಷ್ಟ ಸ್ಥಾನ ಹೊಂದಿರುವ ಗೋಲ್ಕೊಂಡಾ ನಗರದ ಮಾದರಿಯ ಮತ್ತೊಂದು ಪ್ರದೇಶ ತೆಲಂಗಾಣ ರಾಜ್ಯದಲ್ಲಿ ಪತ್ತೆಯಾಗಿದೆ.

ಬರಗಾಲದಿಂದ ತತ್ತರಿಸುತ್ತಿರುವ ತೆಲಂಗಾಣದ ಮೆಹಬೂಬ್ ನಗರದಲ್ಲೂ ವಜ್ರದ ನಿಕ್ಷೇಪಗಳಿರುವುದನ್ನು ಒಸ್ಮಾನಿಯಾ ವಿಶ್ವವಿದ್ಯಾಲಯದ ಸಂಶೋಧನಾ ತಂಡ ಪತ್ತೆ ಹಚ್ಚಿದೆ. ಸಂಶೋಧಕರ ಪ್ರಕಾರ ತೆಲಂಗಾಣದ ಮೆಹಬೂಬ್ ನಗರದಲ್ಲಿ 21 ವಜ್ರದ ನಿಕ್ಷೇಪಗಳಿರುವ ವಲಯಗಳಿವೆಯಂತೆ.

ಮೆಹಬೂಬ್ ನಗರದಲ್ಲಿ ಈ ಹಿಂದೆಯೂ ವಜ್ರದ ನಿಕ್ಷೇಪವಿರುವ ಬಗ್ಗೆ ಅಧ್ಯಯನ ನಡೆದಿತ್ತು. ಆದರೆ ಇದೇ ಮೊದಲ ಬಾರಿಗೆ 21 ವಲಯಗಳು ಪತ್ತೆಯಾಗಿವೆ ಎಂದು ಒಸ್ಮಾನಿಯಾ ವಿಶ್ವವಿದ್ಯಾಲಯದ ಸಂಶೋಧನಾ ತಂಡ ಹೇಳಿದೆ. ಮೆಹಬೂಬ್ ನಗರದಲ್ಲಿ ವಜ್ರ ನಿಕ್ಷೇಪದ ವಲಯಗಳಿರುವುದರಿಂದ ಪಕ್ಕದ ಜಿಲ್ಲೆಯ ಜನರೂ ತಮ್ಮ ಭೂಮಿಯಲ್ಲೂ ವಜ್ರದ ನಿಕ್ಷೇಪಗಳನ್ನು ಹುಡುಕಲು ಪ್ರಾರಂಭಿಸಿದ್ದಾರಂತೆ!
ಅಮೇರಿಕಾ, ಆಸ್ತ್ರೇಲಿಯಾ ತಜ್ಞರೂ ಸಹ ವಜ್ರದ ನಿಕ್ಷೇಪಗಳಿರುವುದರ ಬಗ್ಗೆ ಅಧ್ಯಯನ ನಡೆಸಲು ಮೆಹಬೂಬ್ ನಗರಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಮಾಧ್ಯಮದ ವರದಿಯೊಂದರ ಮೂಲಕ ಬೆಳಕಿಗೆ ಬಂದಿದೆ. ಒಂದು ಕಾಲದಲ್ಲಿ ಗೋಲ್ಕೊಂಡಾ ವಜ್ರ ವ್ಯಾಪಾರದ ಕೇಂದ್ರವಾಗಿತ್ತು. ವಿಶ್ವದಲ್ಲಿ ಅತಿ ಹೆಚ್ಚು ಬೇಡಿಕೆಯುಳ್ಳ ಕೋಹಿನೂರ್ ನೂರ್ ವಜ್ರ, ನಸ್ಸಕ ವಜ್ರಗಳ ಉತ್ಪಾದನೆಗೆ ಗೋಲ್ಕೊಂಡಾ ಪ್ರಸಿದ್ಧವಾಗಿತ್ತು. ಈಗ ಇಂಥದ್ದೇ ವಜ್ರ ನಿಕ್ಷೇಪವಿರುವ ಪ್ರದೇಶ ತೆಲಂಗಾಣದ ಮೆಹಬೂಬ್ ನಗರದಲ್ಲೂ ಪತೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com