ಎಕೆ-47 ರೈಫಿಲ್ ಗಳಿಗೆ ಬಳಸಬಹುದಾದ ಕಾರ್ಟ್ರಿಜ್ ಪತ್ತೆ
ದೇಶ
ಲೂಧಿಯಾನದ ಶಾಲಾ ಆವರಣದಲ್ಲಿ 265 ಜೀವಂತ ಕಾರ್ಟ್ರಿಜ್ ಗಳು ಪತ್ತೆ
ಸ್ವಾತಂತ್ರ್ಯ ದಿನಾಚರಣೆಗೆ ಇನ್ನು 3 ದಿನಗಳು ಬಾಕಿ ಇದ್ದು, ಪಂಜಾಬ್ ನ ಲೂಧಿಯಾನದಲ್ಲಿ 265 ಜೀವಂತ ಕಾರ್ಟ್ರಿಜ್ ಗಳು(ಸಿಡಿಮದ್ದು) ಪತ್ತೆಯಾಗಿವೆ.
ಲೂಧಿಯಾನ: ಸ್ವಾತಂತ್ರ್ಯ ದಿನಾಚರಣೆಗೆ ಇನ್ನು 3 ದಿನಗಳು ಬಾಕಿ ಇದ್ದು, ಪಂಜಾಬ್ ನ ಲೂಧಿಯಾನದಲ್ಲಿ 265 ಜೀವಂತ ಕಾರ್ಟ್ರಿಜ್ ಗಳು(ಸಿಡಿಮದ್ದು) ಪತ್ತೆಯಾಗಿವೆ.
ಲೂಧಿಯಾನದ ಕೆ.ವಿ.ಎಂ ಶಾಲೆಯ ಪ್ರದೇಶದಲ್ಲಿ ಕಾರ್ಟ್ರಿಜ್ ಗಳು ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಶಾಲಾ ವಾಹನದ ಸಿಬ್ಬಂದಿಗಳು ವಿದ್ಯಾರ್ಥಿಗಳನ್ನು ಕರೆತರಬೇಕಾದರೆ ಸಿಡಿಮದ್ದುಗಳನ್ನು ಶಾಲಾ ಆವರಣದಲ್ಲಿ ಗಮನಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಕೆ-47 ನ ವಿವಿಧ ಮಾದರಿಯ ರೈಫಿಲ್ ಗಳಿಗೆ ಬಳಸಬಹುದಾದ ಕಾರ್ಟ್ರಿಜ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಲೂಧಿಯಾನದ ಎಸ್.ಹೆಚ್.ಒ ಗುರ್ಪ್ರೀತ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಗೆ ಕೆಲವು ದಿನಗಳ ಮುನ್ನ ಸಿಡಿಮದ್ದುಗಳು ಪತ್ತೆಯಾಗಿರುವುದು ಶಾಲೆಯಲ್ಲಿ ಆತಂಕ ಮೂಡಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ