ಚೀನಾ ಸರಕುಗಳನ್ನು ತಡೆಗಟ್ಟಲು ಭಾರತ ಸರ್ಕಾರ ಕ್ರಮ ಕೈಗೊಳ್ಳಲಿದೆ: ನಿರ್ಮಲಾ ಸೀತಾರಾಮನ್

ಚೀನಾದ ಅಗ್ಗದ ಸರಕುಗಳನ್ನು ಆಮದು ಮಾಡಿಕೊಳ್ಳುವುದಕ್ಕೆ ಕಡಿವಾಣ ಹಾಕಲಾಗುವುದು ಎಂದು ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಚೀನಾ ಸರಕುಗಳನ್ನು ತಡೆಗಟ್ಟಲು ಭಾರತ ಸರ್ಕಾರ ಕ್ರಮ ಕೈಗೊಳ್ಳಲಿದೆ: ನಿರ್ಮಲಾ ಸೀತಾರಾಮನ್

ಚೆನ್ನೈ: ಚೀನಾ ಕರೆನ್ಸಿ ಅಪಮೌಲ್ಯಗೊಳ್ಳುತ್ತಿರುವುದರಿಂದ ಭಾರತದ ಮೇಲೆ ಉಂಟಾಗುತ್ತಿರುವ ಪರಿಣಾಮದ ಬಗ್ಗೆ ಅರಿವಿದ್ದು ಚೀನಾದ ಅಗ್ಗದ ಸರಕುಗಳನ್ನು ಆಮದು ಮಾಡಿಕೊಳ್ಳುವುದಕ್ಕೆ ಕಡಿವಾಣ ಹಾಕಲಾಗುವುದು ಎಂದು ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ವಿಶ್ವದ ಎಲ್ಲ ಷೇರು ಮತ್ತು ಕರೆನ್ಸಿ ಮಾರುಕಟ್ಟೆಗಳನ್ನು ಕೆಳಕ್ಕೆಳೆದಿರುವ ಯುಆನ್ ಅಪಮೌಲ್ಯ ಬೆಳವಣಿಗೆ, ಗಂಭೀರ ಸಮಸ್ಯೆಯಾಗಿದ್ದು, ಚೀನಾ ತನ್ನ ಅಗ್ಗದ ಸರಕುಗಳನ್ನು ಭಾರತದತ್ತ ತಳ್ಳುವ ಸಾಧ್ಯತೆ ಇದೆ. ಇದರಿಂದಾಗಿ ದೇಶೀಯ ಉತ್ಪನ್ನಗಳು ಬೇಡಿಕೆ ಕಳೆದುಕೊಳ್ಳದಂತೆ ಚೀನಾ ಸರಕುಗಳಿಗೆ ಕಡಿವಾಣ ಹಾಕಲು ಸರ್ಕಾರ ಕ್ರಮ ಕೈಗೊಳ್ಳಲಿದೆ.   

ಭಾರತದ ವಿವಿಧ ಕ್ಷೇತ್ರಗಳ ಮೇಲೆ ಚೀನಾ ಕರೆನ್ಸಿ ಅಪಮೌಲ್ಯದ ಪರಿಣಾಮವನ್ನು ಭಾರತ ಸರ್ಕಾರ ಅವಲೋಕಿಸುವುದರೊಂದಿಗೆ ಉದ್ಯಮ ಸಂಸ್ಥೆಳೊಂದಿಗೆ ಚರ್ಚೆ ನಡೆಸುತ್ತಿರುವುದಾಗಿ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com