ಸರ್ಕಾರದ ಮೊಕದ್ದಮೆಯನ್ನು ಸಮರ್ಥವಾಗಿ ಎದುರಿಸುತ್ತೇವೆ: ನೆಸ್ಲೆ ಕಂಪೆನಿ

ರಾಷ್ಟ್ರೀಯ ಗ್ರಾಹಕ ವಿವಾದ ನಿವಾರಣಾ ಆಯೋಗದ ಮುಂದೆ ಕೇಂದ್ರ ಸರ್ಕಾರ ಹೂಡಿರುವ 640 ಕೋಟಿ ರೂಪಾಯಿಗಳ ಮೊಕದ್ದಮೆಯನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ರಾಷ್ಟ್ರೀಯ ಗ್ರಾಹಕ ವಿವಾದ ನಿವಾರಣಾ ಆಯೋಗದ ಮುಂದೆ ಕೇಂದ್ರ ಸರ್ಕಾರ ಹೂಡಿರುವ 640 ಕೋಟಿ ರೂಪಾಯಿಗಳ ಮೊಕದ್ದಮೆಯನ್ನು ಎದುರಿಸುವ ವಿಶ್ವಾಸವಿದೆ ಎಂದು ನೆಸ್ಲೆ ಇಂಡಿಯಾ ಕಂಪೆನಿ ಹೇಳಿದೆ.

ಮಾರುಕಟ್ಟೆಯಿಂದ ಹಿಂಪಡೆದಿದ್ದ ಮ್ಯಾಗಿ ನಿಷೇಧವನ್ನು ತೆರವುಗೊಳಿಸಿ ಮುಂಬೈ ಹೈಕೋರ್ಟ್ ನೀಡಿರುವ ತೀರ್ಪಿಗೆ ವಿರುದ್ಧವಾಗಿ ಕೇಂದ್ರ ಸರ್ಕಾರ ಆಯೋಗದ ಮುಂದೆ ದಾವೆ ಹೂಡಲು ನಿರ್ಧರಿಸಿರುವುದು ಹೊಸ ಕ್ರಮ. ಆದರೆ ಆಯೋಗದ ಮುಂದೆ ನಾವು ಸಮರ್ಥವಾಗಿ ಎದುರಿಸುತ್ತೇವೆ ಎಂಬ ವಿಶ್ವಾಸ ನಮಗಿದೆ ಎಂದು ಕಂಪೆನಿ ವಕ್ತಾರರು ತಿಳಿಸಿದ್ದಾರೆ.

ನೆಸ್ಲೆ ಕಂಪೆನಿ ಸರ್ಕಾರದ ವಿರುದ್ಧ ಪ್ರತಿದಾವೆ ಹೂಡುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ, ಮೊಕದ್ದಮೆಯ ಪ್ರತಿ ನಮ್ಮ ಬಳಿಗೆ ಬಂದಾಗ ಅದನ್ನು ಅಧ್ಯಯನ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಕಳೆದ ವಾರ ಮುಂಬೈ ಹೈಕೋರ್ಟ್, ಆಹಾರ ಪ್ರಾಧಿಕಾರ ಎಲ್ಲಾ 9 ಬಗೆಯ ಮ್ಯಾಗಿ ನೂಡಲ್ಸ್ ನ್ನು ನಿಷೇಧಿಸಿ ಹೊರಡಿಸಿದ್ದ ಆದೇಶವನ್ನು ತೆಗೆದುಹಾಕಿ ಹೊಸದಾಗಿ ಮತ್ತೊಮ್ಮೆ ಪರೀಕ್ಷೆ ಎದುರಿಸುವಂತೆ ನೆಸ್ಲೆ ಇಂಡಿಯಾ ಕಂಪೆನಿಗೆ ಸೂಚಿಸಿತ್ತು.

ಆಗ ಕೇಂದ್ರ ಸರ್ಕಾರದ ಆಹಾರ ನಾಗರಿಕ ಪೂರೈಕೆ ಇಲಾಖೆ, ಮ್ಯಾಗಿ ಕಂಪೆನಿಯ ತಪ್ಪು ಜಾಹೀರಾತು, ತಪ್ಪು ವ್ಯಾಪಾರ ಕ್ರಮ ಮತ್ತು ಮಾಹಿತಿಯಿಂದಾಗಿ ಸುಮಾರು 640 ಕೋಟಿ ರೂಪಾಯಿ ಸಾರ್ವಜನಿಕರ ಹಣ ಖರ್ಚಾಗಿದೆ ಎಂದು ಗ್ರಾಹಕ ಪಕ್ಕು ಕಾಯ್ದೆಯಡಿ ಮೊಕದ್ದಮೆ ಹೂಡಿದೆ. ಆದರೆ ಕಳೆದ ಮೂರು ದಶಕಗಳಲ್ಲಿ ರಾಷ್ಟ್ರೀಯ ಗ್ರಾಹಕ ವಿವಾದ ನಿವಾರಣಾ ಆಯೋಗದ ಮುಂದೆ ಕಂಪೆನಿ ವಿರುದ್ಧ ಹೂಡುತ್ತಿರುವ ಮೊದಲ ಪ್ರಕರಣ ಇದಾಗಿದೆ.

ನೆಸ್ಲೆ ಇಂಡಿಯಾ ಕಂಪೆನಿಯು, ಆಹಾರ ಸುರಕ್ಷತಾ ಪ್ರಾಧಿಕಾರ ಮತ್ತು ಆಹಾರ ಅಭಿವೃದ್ಧಿ ಪ್ರಾಧಿಕಾರದ ಜೊತೆ ಸಹಕರಿಸಲು ಸಿದ್ಧವಿರುವುದಾಗಿ ಹೇಳಿರುವ ಕಂಪೆನಿ, ವಿವಾದ ಸದ್ಯದಲ್ಲಿಯೇ ಬಗೆಹರಿದು ಮ್ಯಾಗಿ ನೂಡಲ್ಸ್ ಮತ್ತೆ ಮಾರುಕಟ್ಟೆಗೆ ಬರುವ ವಿಶ್ವಾಸವಿದೆ ಎಂದು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com