
ತಿರುವನಂತಪುರ: ಕೇರಳ ಈಗ ಸಂಪೂರ್ಣ `ಡಿಜಿಟಲ್ ರಾಜ್ಯ'! ಈ ವಿಚಾರವನ್ನು ಸ್ವಾತಂತ್ರ್ಯ ದಿನದ ಸಂಭ್ರಮದ ವೇಳೆ ಸಿಎಂ ಉಮನ್ ಚಾಂಡಿ ಘೋಷಿಸಿದ್ದಾರೆ. ರಾಜ್ಯವು ಶೇ.100ರಷ್ಟು ಮೊಬೈಲ್ ಸಾಂದ್ರತೆ ಸಾಧಿಸಿದೆ. ಶೇ.75 ಮಂದಿ ಇ- ಶಿಕ್ಷಿತರಾಗಿದ್ದಾರೆ. ಅತಿ ಹೆಚ್ಚು ಪ್ರಮಾಣದಲ್ಲಿ ಡಿಜಿಟಲ್ ಬ್ಯಾಂಕಿಂಗ್ ಅನ್ನು ಜನ ಅವಲಂಬಿಸಿ ದ್ದಾರೆ, ಪಂಚಾಯತ್ ವರೆಗೂ ರಾಜ್ಯದಲ್ಲಿ ಬ್ರಾಡ್‍ಬ್ಯಾಂಡ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಚಾಂಡಿ ಅವರು ಭಾಷಣದಲ್ಲಿ ಹೇಳಿ ದ್ದಾರೆ. ಇ- ಜಿಲ್ಲೆ ಯೋಜನೆಯನ್ನು ರಾಜ್ಯಾದ್ಯಂತ ಜಾರಿ, ಆಧಾರ್, ಬ್ಯಾಂಕ್ ಖಾತೆ ಸೇರ್ಪಡೆ ಮಾಡಿರುವುದು ಡಿಜಿಟಲ್ ಕೇರಳಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿ ದೆ. ದಾಖಲೆ ಸೂಚಕಗಳನ್ನು ಆಧರಿಸಿ ಕೇರಳ ವನ್ನು ಡಿಜಿಟಲ್ ರಾಜ್ಯವೆಂದು ಘೋಷಿಸುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದಿದ್ದಾರೆ.
Advertisement