ನಿತೀಶ್ ಕಟಾರಾ ಕೊಲೆ ಪ್ರಕರಣ: ತೀರ್ಪು ಎತ್ತಿ ಹಿಡಿದ ಸುಪ್ರೀಂಕೋರ್ಟ್

2002ರ ನಿತೀಶ್ ಕಟಾರಾ ಕೊಲೆ ಪ್ರಕರಣದ ಅಪರಾಧಿಗಳಾದ ವಿಕಾಸ್ ಮತ್ತು ವಿಶಾಲ್ ಯಾದವ್ ಮತ್ತು ಸುಕ್ ದೇವ್ ಪೆಹಲ್ವಾನ್...
ನಿತೀಶ್ ಕಟಾರಾ(ಸಂಗ್ರಹ ಚಿತ್ರ)
ನಿತೀಶ್ ಕಟಾರಾ(ಸಂಗ್ರಹ ಚಿತ್ರ)
Updated on: 

ನವದೆಹಲಿ: 2002ರ ನಿತೀಶ್ ಕಟಾರಾ ಕೊಲೆ ಪ್ರಕರಣದ ಅಪರಾಧಿಗಳಾದ ವಿಕಾಸ್ ಮತ್ತು ವಿಶಾಲ್ ಯಾದವ್ ಮತ್ತು ಸುಕ್ ದೇವ್ ಪೆಹಲ್ವಾನ್ ಅವರ 30 ವರ್ಷಗಳ ಜೈಲು ಶಿಕ್ಷೆಯನ್ನು ಕಡಿಮೆ ಮಾಡಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆಯಾದರೂ ತನ್ನ ತೀರ್ಪನ್ನು ಎತ್ತಿ ಹಿಡಿದಿದೆ.

ಐಎಎಸ್ ಅಧಿಕಾರಿ ಪುತ್ರ ಹಾಗೂ ವ್ಯಾಪಾರ ಕಾರ್ಯನಿರ್ವಾಹಕನಾಗಿದ್ದ 25 ವರ್ಷದ ನಿತೀಶ್ ಕಟಾರಾನನ್ನು 2002ರಲ್ಲಿ ಬರ್ಭರವಾಗಿ ಹತ್ಯೆ ಮಾಡಲಾಗಿತ್ತು. ಇದೊಂದು ಯಾದವ್ ಸಹೋದರರ ಪೂರ್ವ ತಯಾರಿಯ ಪಿತೂರಿ ಕೊಲೆ ಎಂದು ಸುಪ್ರೀಂಕೋರ್ಟ್ ಸೋಮವಾರ ತೀರ್ಪು ನೀಡಿದೆ.

ರಾಜಕೀಯ ವ್ಯಕ್ತಿ ಡಿ.ಪಿ.ಯಾದವ್ ಅವರ ಮಗಳಾಗಿದ್ದ ಭಾರ್ತಿ ಯಾದವ್ ಳನ್ನು ಪ್ರೀತಿಸುತ್ತಿದ್ದ ನಿತೀಶ್ ಕಟಾರಾನನ್ನು ಆಕೆಯ ಸೋದರರು ಅಪಹರಿಸಿ ಬೆಂಕಿಯಿಟ್ಟು ಕೊಂದು ಹಾಕಿದ್ದರು.

ಕಟಾರಾ, ಭಾರ್ತಿ ಯಾದವ್ ಮತ್ತು ಆಕೆಯ ಸಹೋದರರು ಒಂದು ಮದುವೆ ಸಮಾರಂಭ ಮುಗಿಸಿ ಹೊರಬರುತ್ತಿದ್ದ ವೇಳೆ ಕಟಾರಾನನ್ನು ಅಪಹರಿಸಿ ಕರೆದೊಯ್ಯಲಾಗಿತ್ತು. ಬಹಳ ದಿನಗಳ ನಂತರ ಅವರ ಮೃತದೇಹ ಗುರುತಿಸಲಾಗದಷ್ಟು ಸುಟ್ಟ ಸ್ಥಿತಿಯಲ್ಲಿ ಹೆದ್ದಾರಿಯೊಂದರ ಪಕ್ಕ ಬಿದ್ದಿತ್ತು.
 
ಸುಪ್ರೀಂಕೋರ್ಟ್ ತೀರ್ಪಿಗೆ ಪ್ರತಿಕ್ರಿಯಿಸಿದ ನಿತೀಶ್ ಕಟಾರಾ ತಾಯಿ ನೀಲಮ್ ಕಟಾರಾ, ತಾವೀಗ ನಿರಾಳರಾಗಿದ್ದೇವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com