
ಚೆನ್ನೈ: ಮಂಗಳಮುಖಿಯರೆಂದರೆ ದಾರಿಹಯೋಕರಿಗೆ ಹಣಕ್ಕಾಗಿ ಪೀಡಿಸುವವರಷ್ಟೇ ಅಲ್ಲ. ಸಮಾಜ ಅವಕಾಶಕೊಟ್ಟರೆ ಅವರೂ ಇತರರಂತೆ ಬದುಕಬಲ್ಲರು, ತಮ್ಮಲ್ಲಿರುವ ಪ್ರತಿಭೆಯ ಅನಾವರಣ ಮಾಡಬಲ್ಲರು ಎನ್ನುವುದಕ್ಕೆ ತಮಿಳುನಾಡಿನ 37 ವರ್ಷದ ಪೊನ್ನಿ ಉತ್ತಮ ಉದಾಹರಣೆ.
ಬಿಎಸ್ಸಿ ಪದವೀಧರೆ ಪೊನ್ನಿ ಆ.23ರಂದು ಚೆನ್ನೈನಲ್ಲಿ ಭರತನಾಟ್ಯ ಪ್ರದರ್ಶನ ನೀಡಲಿದ್ದಾರೆ. ಪದವಿ ಬಳಿಕ ಭರತನಾಟ್ಯ ಡಿಪ್ಲೊಮಾ ಮಾಡಿರುವ ಪೊನ್ನಿ ನಂತರ ತಮ್ಮದೇ ನೃತ್ಯ ಶಾಲೆ ಆರಂಭಿಸಿದ್ದರು.
ಎನ್ ಜಿಒ ಜತೆಗೂಡಿ ಮಂಗಳಮುಖಿಯರಿಗೆ ನೃತ್ಯ ಶಿಕ್ಷಣ ನೀಡುವ ಕೆಲಸ ಆರಂಭಿಸಿದರು. ಸಮಾಜದ ಮುಖ್ಯವಾಹಿನಿಯಲ್ಲಿರುವವರಿಗಿಂತ ಸ್ಲಂನಲ್ಲಿರುವವರು ತಮ್ಮನ್ನು ಬೇಗ ಒಪ್ಪಿಕೊಳ್ಳುತ್ತಾರೆ ಎನ್ನುವ ಉದ್ದೇಶದಿಂದ ಅವರು ಸ್ಲಂನಲ್ಲೇ ಶಾಲೆ ತೆರೆದಿದ್ದಾರೆ.
Advertisement