ದೆಹಲಿ ರಾಷ್ಟ್ರದ ಅತ್ಯಾಚಾರ ನಗರ: ಎನ್ ಸಿ ಆರ್ ಬಿ

ದೆಹಲಿ ರಾಜ್ಯವು ಭಾರತ ದೇಶದ ಅತ್ಯಾಚಾರ ರಾಜಧಾನಿ ಎಂದು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ(ಎನ್ ಸಿ ಆರ್ ಬಿ)...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೆಹಲಿ ರಾಜ್ಯವು ಭಾರತ ದೇಶದ ಅತ್ಯಾಚಾರ ರಾಜಧಾನಿ ಎಂದು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ(ಎನ್ ಸಿ ಆರ್ ಬಿ) ತಿಳಿಸಿದೆ.

ಅಪರಾಧ ವಿಭಾಗ ನಡೆಸಿದ ಅಧ್ಯಯನ ಪ್ರಕಾರ, ದೆಹಲಿಯಲ್ಲಿ ಬೇರೆಲ್ಲಾ ರಾಜ್ಯಗಳಿಗಿಂತ ಹೆಚ್ಚಾಗಿ ಅತ್ಯಾಚಾರ ಪ್ರಕರಣಗಳು ನಡೆಯುತ್ತವೆ ಎಂದು ತಿಳಿದುಬಂದಿದೆ.ಕಳೆದ ವರ್ಷ ದೆಹಲಿಯಲ್ಲಿ ಸಾವಿರದ 800 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. 2013ರಲ್ಲಿ ಇಲ್ಲಿ ಸಾವಿರದ 440 ಪ್ರಕರಣಗಳು ವರದಿಯಾಗಿದ್ದವು.

ಎನ್ ಸಿಆರ್ ಬಿ ದೇಶದ 4 ಮಹಾನಗರಗಳಲ್ಲಿ ಅಧ್ಯಯನ ನಡೆಸಿದ್ದು, ಅವುಗಳಲ್ಲಿ ಕೋಲ್ಕತ್ತಾ ಸುರಕ್ಷಿತ ನಗರ ಎಂದು ಅಂಕಿಅಂಶಗಳಿಂದ ಗೊತ್ತಾಗಿದೆ. ಇಲ್ಲಿ ಕಳೆದ ವರ್ಷ 36 ಪ್ರಕರಣಗಳು ವರದಿಯಾಗಿವೆ.

ಮುಂಬೈಯಲ್ಲಿ ಶೇಕಡಾ 55ರಷ್ಟು ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದು, 2013ಕ್ಕಿಂತ ಕಳೆದ ವರ್ಷ ಶೇಕಡಾ 67ರಷ್ಟು ದೌರ್ಜನ್ಯ ಪ್ರಕರಣಗಳು ಇಲ್ಲಿ ವರದಿಯಾಗಿವೆ.ಉತ್ತರ ಪ್ರದೇಶದಲ್ಲಿ 197 ಪ್ರಕರಣಗಳು ಬೆಳಕಿಗೆ ಬಂದಿವೆ.

ಅಪ್ರಾಪ್ತ ವಯಸ್ಸಿನವರು ಕೂಡ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವ ಬಗ್ಗೆ ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ. ಶೇಕಡಾ 1.2ರಷ್ಟು ಮಂದಿ ಅಪರಾಧ ಪ್ರಕರಣಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ. ಒಟ್ಟು ಅಪರಾಧಿಗಳಲ್ಲಿ ಶೇಕಡಾ 5.93ರಷ್ಟು ಅಪ್ರಾಪ್ತರು ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಾರೆ.

ಅಪರಾಧಗಳಲ್ಲಿ ಮಹಿಳೆಯರನ್ನು, ಯುವತಿಯರನ್ನು ಮತ್ತು ಬಾಲಕಿಯರನ್ನು ಅತ್ಯಾಚಾರ ಮಾಡುವುದು, ಅತ್ಯಾಚಾರಕ್ಕೆ ಯತ್ನಿಸುವುದು, ಅಪಹರಿಸುವುದು, ವರದಕ್ಷಿಣೆ ಕಿರುಕುಳ, ಮಹಿಳೆ ಮೇಲೆ ಹಲ್ಲೆ, ಅವಮಾನ ಮಾಡುವುದು, ಮಹಿಳೆಯ ವಿನಮ್ರತೆಯನ್ನು ದುರುಪಯೋಗಪಡಿಸುವುದು, ಗಂಡನಿಂದ ಮತ್ತು ಸಂಬಂಧಿಕರಿಂದ ಕಿರುಕುಳ, ವಿದೇಶಗಳಿಂದ ಹುಡುಗಿಯರನ್ನು ಆಮದು ಮಾಡಿಕೊಳ್ಳುವುದು,ಆತ್ಮಹತ್ಯೆ ಕುಮ್ಮಕ್ಕು ನೀಡುವುದು, ಮಹಿಳೆಯನ್ನು ಕೆಟ್ಟದ್ದಾಗಿ ಬಿಂಬಿಸುವುದು, ಗೃಹ ಹಿಂಸೆ ಇತ್ಯಾದಿಗಳು ಸೇರಿಕೊಂಡಿವೆ.   

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com